ADVERTISEMENT

ದೊಡ್ಡಬಳ್ಳಾಪುರ | ಪ್ರೀತಿ ವಿಚಾರಕ್ಕೆ ಆಟೊ ಚಾಲಕನ ಕೊಲೆ: ಪರಾರಿಯಾಗಿದ್ದ ಐವರ ಬಂಧನ

ಕೆ.ಆರ್‌. ಪುರಂನಲ್ಲಿ ಕಾರು ನಿಲ್ಲಿಸಿ, ಹೊಸಕೋಟೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 3:10 IST
Last Updated 12 ಡಿಸೆಂಬರ್ 2025, 3:10 IST
ದೊಡ್ಡಬಳ್ಳಾಪುರದ ಡಿ.ಕ್ರಾಸ್‌ ಸಮೀಪ ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ಪವನ್‌ ಎಂಬಾತನನ್ನು ಕೊಚ್ಚಿ ಕೊಲೆ ನಡೆಸಿದ್ದ ಸ್ಥಳಕ್ಕೆ ಗುರುವಾರ ಆರೋಪಿಗಳನ್ನು ಕರೆತಂದು ಸ್ಥಳ ಮಹಜರ್‌ ನಡೆಸಿದ ಪೊಲೀಸರು  
ದೊಡ್ಡಬಳ್ಳಾಪುರದ ಡಿ.ಕ್ರಾಸ್‌ ಸಮೀಪ ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ಪವನ್‌ ಎಂಬಾತನನ್ನು ಕೊಚ್ಚಿ ಕೊಲೆ ನಡೆಸಿದ್ದ ಸ್ಥಳಕ್ಕೆ ಗುರುವಾರ ಆರೋಪಿಗಳನ್ನು ಕರೆತಂದು ಸ್ಥಳ ಮಹಜರ್‌ ನಡೆಸಿದ ಪೊಲೀಸರು     

ದೊಡ್ಡಬಳ್ಳಾಪುರ: ಇಲ್ಲಿಯ ಡಿ.ಕ್ರಾಸ್‌ ಬಳಿ ನಡುರಸ್ತೆಯಲ್ಲಿಯೇ ಕಳೆದ ಗುರುವಾರ ಆಟೊ ಚಾಲಕ ಪವನ್ ಎಂಬಾತನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾನೂನು ಸಂಘರ್ಷಕ್ಕೆ ಒಳಗಾದ ಆರೋಪಿ ಸೇರಿದಂತೆ ತಾಲ್ಲೂಕಿನ ಮಲ್ಲಾತಹಳ್ಳಿ ಗ್ರಾಮದ ಸಂದೀಪ್(32), ಸಿದ್ದೇನಾಯಕನಹಳ್ಳಿಯ ಉದಯ್ (23) ಹೇಮಂತ್ (22), ಮಂಜು (24) ಎಂಬುವರನ್ನು ಬಂಧಿಸಲಾಗಿದೆ.

ಪ್ರೀತಿಯ ವಿಚಾರಕ್ಕಾಗಿ ಪವನ್‌ ಕೊಲೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಮೂರು ದಿನ ವಶಕ್ಕೆ ಪಡೆದಿದ್ದಾರೆ.

ADVERTISEMENT

ಕೊಲೆ ನಂತರ ಆರೋಪಿಗಳು ಕಾರಿನಲ್ಲಿ ಬೆಂಗಳೂರು ಹೊರವಲಯದ ಕೆ.ಆರ್.ಪುರದಲ್ಲಿ ಕಾರು ನಿಲ್ಲಿಸಿ ಹೊಸಕೋಟೆ ತಾಲ್ಲೂಕಿನ ಮೇಡಿಮಲ್ಲಸಂದ್ರ ಗ್ರಾಮದಲ್ಲಿ ಸ್ನೇಹಿತನ ಮನೆಯಲ್ಲಿ ತಲೆಮರೆಸಿಕೊಂಡಿದ್ದರು.

ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಇನ್‌ಸ್ಪೆಕ್ಟರ್‌ ಅಮರೇಶ್‌ ಗೌಡ, ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌, ಎಂ.ಬಿ. ನವೀನಕುಮಾರ್ ನೇತೃತ್ವದಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.