ADVERTISEMENT

ಗಾಳಿ, ಮಳೆಗೆ ಉರುಳಿದ ಬಾಳೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 5:00 IST
Last Updated 24 ಏಪ್ರಿಲ್ 2021, 5:00 IST
ಗಾಳಿ,ಮಳೆಗೆ ಮುರಿದು ಬಿದ್ದ ಬಾಳೆ ಗಿಡಗಳು
ಗಾಳಿ,ಮಳೆಗೆ ಮುರಿದು ಬಿದ್ದ ಬಾಳೆ ಗಿಡಗಳು   

ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹೋಬಳಿಯಲ್ಲಿ ಗುರುವಾರ ರಾತ್ರಿ ಬಿದ್ದ ಗಾಳಿ, ಮಳೆಗೆ ಸಾಸಲು ಗ್ರಾಮದ ಚಿಕ್ಕಯಲಪ್ಪ, ಸಿದ್ದಪ್ಪ ಅವರಿಗೆ ಸೇರಿದ್ದ ಬಾಳೆ ತೋಟದಲ್ಲಿನ ಗೊನೆಗಳು ಮುರಿದು ಬಿದ್ದಿವೆ.

ಬಾಳೆ ಗೊನೆ ಬಂದಿದ್ದ ಸುಮಾರು 250ಕ್ಕೂ ಹೆಚ್ಚು ಗಿಡಗಳು ನೆಲಕ್ಕೆ ಉರುಳಿವೆ ಬಿದ್ದಿವೆ. ಇದರಿಂದ ಸುಮಾರು ₹60 ಸಾವಿರದಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗಾಳಿ, ಮಳೆಯಿಂದ ಬೆಳೆನಷ್ಟ ಅನುಭವಿಸಿದ್ದ ರೈತರ ತೋಟಗಳಿಗೆ ಕಂದಾಯ ಇಲಾಖೆ ಸಾಸಲು ಹೋಬಳಿಯ ರಾಜಸ್ವ ನಿರೀಕ್ಷಕ ಎನ್.ವೆಂಕಟಶ್ವಾಮಿಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಹನುಮಕ್ಕ ಭೇಟಿ ನೀಡಿ ಬೆಳೆ ನಷ್ಟ ಅಂದಾಜಿಸಿ ತಹಶೀಲ್ದಾರ್ ಅವರಿಗೆ ವರದಿ ನೀಡಿದ್ದಾರೆ.

ಸೂಲಿಬೆಲೆ: ಹೋಬಳಿ ಮತ್ತು ನಂದಗುಡಿ ಹೋಬಳಿಯ ಹಲವು ಕಡೆ ಶುಕ್ರವಾರ ಸಂಜೆ ಬಿರುಸಿನ ಗಾಳಿ, ಗುಡುಗು ಸಹಿತ ಮಳೆಯಾಗಿದೆ.

ADVERTISEMENT

ನಂದಗುಡಿ ಹೋಬಳಿಯ ಹಲವೆಡೆ ಹಾಗೂ ಸೂಲಿಬೆಲೆ ಪಟ್ಟಣದಲ್ಲಿ ಮತ್ತು ಹೋಬಳಿಯ ಗಿಡ್ಡಪ್ಪನಹಳ್ಳಿ, ಬಾಲೇನಹಳ್ಳಿ, ಇ.ಮುತ್ಸಂದ್ರ ಸುತ್ತ ಮುತ್ತ ಮಳೆಯಾಗಿದೆ. ನಂದಗುಡಿ ಹೋಬಳಿಯ ರಾಮ ಗೋವಿಂದಪುರ ಗ್ರಾಮದಲ್ಲಿ ಗಾಳಿಗೆ ವಿದ್ಯುತ್ ಕಂಬಗಳು, ಮರಗಳು ಉರಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.