ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಜಪಾನ್ ದೇಶಕ್ಕೆ ಪ್ರಾಣಿ ವಿನಿಮಯ ಯೋಜನೆ ಅಡಿ ಪ್ರಯಾಣ ಬೆಳೆಸಿದ ಗಜಪಡೆ ಸುರಕ್ಷಿತವಾಗಿ ಜಪಾನ್ ತಲುಪಿದೆ.
ಸುರೇಶ್ (8 ವರ್ಷ), ಗೌರಿ (9), ಶ್ರುತಿ (7) ಹಾಗೂ ತುಳಸಿ (5) ಆನೆಗಳು ಕತಾರ್ ಏರ್‌ವೇಸ್ ಸರಕು ಸಾಗಣೆ ವಿಮಾನ ಮೂಲಕ ಶುಕ್ರವಾರ ಬೆಳಗ್ಗೆ ಜಪಾನ್ ತಲುಪಿದವು.
ಆನೆಗಳಿಗಾಗಿ ತಯಾರಿಸಿದ್ದ ಪೆಟ್ಟಿಗೆ (ಕ್ರಾಲ್)ಯಲ್ಲಿ ಪ್ರತ್ಯೇಕವಾಗಿ ಆನೆಗಳನ್ನು ಸಾಗಿಸಲಾಯಿತು. ಅಲ್ಲಿನ ವಿಮಾನ ನಿಲ್ದಾಣ ತಲುಪಿದ ಬಳಿಕ ಪೆಟ್ಟಿಗೆಗಳನ್ನು ಲಾರಿಯಲ್ಲಿ ಇರಿಸಿ ಹಿಮೇಜಿ ಪಾರ್ಕ್ ಸಾಗಿಸಲಾಯಿತು.
ಆನೆಗಳನ್ನು ಕ್ವಾರಂಟೈನ್ ಮಾಡಲಾಗಿದ್ದುಮ ಅವುಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ. ಜಪಾನ್‌ಗೆ ತೆರಳಿದ ಮೊದಲ ದಿನ ಆನೆಗಳಿಗೆ ಭಾರತ ಶೈಲಿಯ ಆಹಾರವನ್ನೇ ನೀಡಲಾಗುತ್ತದೆ. ಇದಕ್ಕಾಗಿ ರಾಗಿ ಮತ್ತು ಅಕ್ಕಿಯನ್ನು ಕೊಂಡಯ್ಯಲಾಗಿದೆ.
ಪ್ರಾಣಿ ವಿನಿಮಯ ಯೋಜನೆ ಅಡಿ ಜಪಾನ್ ಹಿಮೇಜಿ ಸಫಾರಿ ಉದ್ಯಾನಕ್ಕೆ ವಿಮಾನದ ಮೂಲಕ ತೆರಳಿದ ನಾಲ್ಕು ಆನೆಗಳು ಸುರಕ್ಷಿತವಾಗಿ ಜಪಾನ್ ತಲುಪಿವೆಸೂರ್ಯಸೇನ್ ಇ.ಡಿ ಬನ್ನೇರುಘಟ್ಟ ಜೈವಿಕ ಉದ್ಯಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.