ಛಾಯಾಗ್ರಹಣದ ರಂಧ್ರಗಳನ್ನು ಮುಚ್ಚಿರುವುದು
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಶುಕ್ರವಾರ ಸಫಾರಿಗೆ ತೆರಳಿದ್ದ ಬಾಲಕನೊಬ್ಬನ ಕೈಯನ್ನು ಚಿರತೆ ಪರಚಿ ಗಾಯ ಮಾಡಿದ್ದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿ ವಾಹನಗಳ ಛಾಯಾಗ್ರಹಣದ ರಂಧ್ರಗಳಿಗೆ ಜಾಲರಿ ಅಳವಡಿಸಲಾಗಿದೆ.
ಶುಕ್ರವಾರ ನಡೆದ ಘಟನೆಯಿಂದ ಎಚ್ಚೆತ್ತುಕೊಂಡ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಿಬ್ಬಂದಿ ಎಸಿ ರಹಿತವಾದ 20 ವಾಹನಗಳಿಗೂ ಛಾಯಗ್ರಹಣದ ರಂಧ್ರಗಳಿಗೆ ಜಾಲರಿ ಅಳವಡಿಸಲಾಗಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸಹ ಸೂಚನೆ ನೀಡಿದ್ದರು. ಶುಕ್ರವಾರ 12 ವರ್ಷದ ಬಾಲಕನ ಮೇಲೆ ಚಿರತೆ ಗಾಯ ಮಾಡಿದ ನಂತರ ಎಲ್ಲಾ ವಾಹನಗಳಿಗೂ ಛಾಯಾಗ್ರಹಣದ ರಂಧ್ರಗಳನ್ನು ಮುಚ್ಚಲಾಗಿದೆ.
ಬನ್ನೇರುಘಟ್ಟ ಸಫಾರಿ ವಾಹನಗಳ ಛಾಯಾಗ್ರಹಣದ ರಂಧ್ರಗಳನ್ನು ಮುಚ್ಚುತ್ತಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.