ಆನೇಕಲ್: ತಾಲ್ಲೂಕಿನ ಜಿಗಣಿ ಜನತೆ ಸರ್ಕಸ್ ನೋಡಲು ಬೇರೆ ಎಲ್ಲೂ ಹೋಗಬೇಕಿಲ್ಲ. ಜಿಗಣಿಯ ಕೈಗಾರಿಕಾ ಪ್ರದೇಶಕ್ಕೆ ಬಂದರೆ ಸಾಕು, ಬೈಕ್ ಸವಾರರ ಅದ್ಬುತ ಸರ್ಕಸ್
ನೋಡಬಹುದು!.
ಗ್ರಾನೈಟ್ ನಗರಿ ಎನಿಸಿಕೊಂಡಿರುವ ಜಿಗಣಿ ಕೈಗಾರಿಕಾ ಪ್ರದೇಶದ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು, ಇಲ್ಲಿನ ರಸ್ತೆಗಳಲ್ಲಿ ಬೈಕ್ ಸವಾರರ ಸರ್ಕಸ್ ಮಾಡುತ್ತಲೇ ಸಂಚರಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಕೈಗಾರಿಕಾ ಪ್ರದೇಶದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಸಂಚಾರದ ಯೋಗ್ಯತೆ ಕಳೆದುಕೊಂಡಿದೆ. ಇನ್ನೂ ರಸ್ತೆ ಬದಿಯಲ್ಲೇ ಸುರಿದಿರುವ ಕಸದ ರಾಶಿ ವಿಲೇವಾರಿಯಾಗದೆ ಗಬ್ಬುದ್ದೆ
ನಾರುತ್ತಿದೆ.
ತಾಲ್ಲೂಕಿನ ಜಿಗಣಿ ಕೈಗಾರಿಕ ಪ್ರದೇಶದಲ್ಲಿ ಬಯೋಕಾನ್, ಸನ್‌ಸೇರಾ, ಮೈಕ್ರೋ ಲ್ಯಾಬ್ಸ್ ಸೇರಿದಂತೆ ನೂರಾರು ಪ್ರತಿಷ್ಠಿತ ಕಂಪನಿಗಳಿವೆ. ನಿತ್ಯ ಸಾವಿರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಗ್ರಾನೈಟ್ ನಗರಿಯಾಗಿರುವ ಜಿಗಣಿಯಲ್ಲಿ ನೂರಾರು ಗ್ರಾನೈಟ್ ಅಂಗಡಿಗಳಿವೆ. ಗ್ರಾನೈಟ್ ಖರೀದಿಸಲು ಹೊರ ರಾಜ್ಯಗಳಿಂದಲೂ ಜಿಗಣಿಗೆ ಬರುತ್ತಾರೆ. ಆದರೆ ಜಿಗಣಿ ಕೈಗಾರಿಕ ಪ್ರದೇಶದ ಬಹುತೇಕ ಸಂಪರ್ಕ ರಸ್ತೆಗಳು ಗುಂಡಿಗಳಿಂದ ಕೂಡಿವೆ. ರಸ್ತೆ ಗುಂಡಿಗಳ ಸಮಸ್ಯೆಯಿಂದ ಕಾರ್ಖಾನೆಗಳಿಗೆ ತೆರಳುವವರು ಪ್ರತಿನಿತ್ಯ ಹಿಡಿ ಶಾಪ ಹಾಕುತ್ತಾ
ಸಂಚರಿಸಬೇಕಾಗಿದೆ.
ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಗುಂಡಿಗಳಿಂದ ಪ್ರತಿನಿತ್ಯ ಪರದಾಡುವಂತಾಗಿದೆ. ಸಂಪರ್ಕ ರಸ್ತೆಗಳಲ್ಲಿ ಬೈಕ್ ಓಡಿಸಲು ಆಗುತ್ತಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚಿಸುವ ಬದಲು ಸುಸಜ್ಜಿತ ರಸ್ತೆ ನಿರ್ಮಿಸಿದೀಪು, ಕಾರ್ಮಿಕ
ರಸ್ತೆ ಬದಿ ಕಸ ಇರುವುದರಿಂದ ಸಂಚರಿಸಲು ಕಷ್ಟವಾಗುತ್ತದೆ. ನಾಯಿಗಳ ಕಾಟ ಸಹ ಹೆಚ್ಚಾಗಿದೆ. ರಸ್ತೆ ಬದಿಯಲ್ಲಿ ಕಸ ಸುರಿಯುವವರ ವಿರುದ್ಧ ಕ್ರಮ ವಹಿಸಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕುಜ್ಯೋತಿ, ಜಿಗಣಿ ನಿವಾಸಿ
ಒಂದೆಡೆ ರಸ್ತೆ ಗುಂಡಿಗಳ ಸಮಸ್ಯೆಯಾದರೆ ಮತ್ತೊಂದೆಡೆ ಕಸದ ಸಮಸ್ಯೆ ಸಹ ಜಿಗಣಿ ಕೈಗಾರಿಕ ಪ್ರದೇಶದಲ್ಲಿದೆ. ರಸ್ತೆ ಬದಿಯಲ್ಲೇ ಕಸ ಸುರಿಯಲಾಗುತ್ತಿದ್ದು, ಇದರಿಂದಾಗಿ ಇಡೀ ಪ್ರದೇಶವೇ ಗಬ್ಬು ನಾರುವಂತಾಗಿದೆ. ಈ ರಸ್ತೆಯಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಜಿಗಣಿ-ಬನ್ನೇರುಘಟ್ಟ ರಸ್ತೆಯಲ್ಲಿ ಕಸದ ರಾಶಿ ಬಿದ್ದಿರುವುದರಿಂದ ಸಾರ್ವನಿಕರು ಓಡಾಡಲು ಸಾಧ್ಯವಾಗುತ್ತಿಲ್ಲ.
ಆನೇಕಲ್-ಜಿಗಣಿ ರಸ್ತೆಯಲ್ಲಿಯೂ ಅಲ್ಲಲ್ಲಿ ಕಸದ ರಾಶಿಯಿದೆ. ಸಂತೆಯ ಸಂದರ್ಭದಲ್ಲಿ ತ್ಯಾಜ್ಯ ಮತ್ತು ಕಸವನ್ನು ರಸ್ತೆಯ ಪಕ್ಕದಲ್ಲಿಯೇ ಸುರಿಯುತ್ತಿರುವುದರಿಂದ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದೆ.ಮಳೆ ಬಂದರೆ ಕಸ ರಸ್ತೆಗೆ ಬರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.