ADVERTISEMENT

ವಾರದ ಸಂತೆ ರದ್ದು ಸ್ಥಳೀಯರಿಗೆ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 5:33 IST
Last Updated 26 ಏಪ್ರಿಲ್ 2021, 5:33 IST

ಸೂಲಿಬೆಲೆ: ‘ವಾರಾಂತ್ಯದ ಕರ್ಫ್ಯೂ’ ಜಾರಿಯಿರುವ ಕಾರಣ, ಭಾನುವಾರ ಬೆಳಿಗ್ಗೆ ಸಂತೆ ಮೈದಾನದಲ್ಲಿರುವ ತರಕಾರಿ ಮತ್ತು ಕೋಳಿ ಅಂಗಡಿಗಳಲ್ಲಿ ಮಾಂಸ, ಮೀನು ಮತ್ತು ತರಕಾರಿ ಕೊಳ್ಳಲು ಜನ ಮುಗಿಬಿದ್ದರು.

ಸೂಲಿಬೆಲೆ ಪಟ್ಟಣದಲ್ಲಿ ಭಾನುವಾರ ನಡೆಯುವ ವಾರದ ಸಂತೆಯನ್ನು ಗ್ರಾಮ ಪಂಚಾಯಿತಿ ರದ್ದು ಪಡಿಸಿತ್ತು. ಬೆಳಿಗ್ಗೆ 6ರಿಂದ 10ರವರೆಗೆ ದಿನ ಬಳಕೆಯ ಅವಶ್ಯ ವಸ್ತುಗಳನ್ನು ಕೊಳ್ಳಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಹೊರ ಊರಿನ ತರಕಾರಿ ಮಾರಾಟಗಾರರು ಬರದ ಕಾರಣ ಮತ್ತು ವಸ್ತುಗಳು ಕೊಳ್ಳಲು ಕನಿಷ್ಠ ಸಮಯ ನಿಗದಿಪಡಿಸಿದ್ದರಿಂದ ಜನ ವಸ್ತುಗಳನ್ನು ಕೊಳ್ಳಲು ಅಧಿಕ ಸಂಖ್ಯೆಯಲ್ಲಿದ್ದರು.

ತರಕಾರಿ, ಮೀನು ಮತ್ತು ಕೋಳಿ ಮಾಂಸದ ಅಂಗಡಿಗಳ, ಸ್ಥಳೀಯ ಮಾರಾಟಗಾರರಿಗೆ ಭರ್ಜರಿ ವ್ಯಾಪಾರವಾಯಿತು. ಬೆಳಿಗ್ಗೆ 9 ಗಂಟೆಗೆ ಗರಿಷ್ಠ ವ್ಯಾಪಾರವಾಗಿ ಬಹುತೇಕ ತರಕಾರಿಗಳು ಖಾಲಿಯಾಗಿದ್ದವು. ಸೊಪ್ಪು, ಕೊತಂಬರಿ, ಪುದಿನ ಮಾರುವ ರಸ್ತೆ ಬದಿಯ ವ್ಯಾಪಾರಿಗಳ ಬಹುತೇಕ ಅಂಗಡಿಗಳಲ್ಲಿ ಸೊಪ್ಪು ಖಾಲಿಯಾಗಿ ಸ್ಥಳೀಯ ಆಡಳಿತ ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿ ಮುಚ್ಚಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.