ADVERTISEMENT

ಚರ್ಮಗಂಟು ರೋಗ ತಡೆಗೆ ಲಸಿಕೆ ಖರೀದಿಸಿ: ಬಿ.ಸಿ. ಆನಂದ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 6:59 IST
Last Updated 9 ಅಕ್ಟೋಬರ್ 2022, 6:59 IST

ದೊಡ್ಡಬಳ್ಳಾಪುರ:ತಾಲ್ಲೂಕಿನ ಕೆಲವು ಗ್ರಾಮಗಳ ವ್ಯಾಪ್ತಿಯ ರಾಸುಗಳಲ್ಲಿ ಚರ್ಮಗಂಟು ರೋಗ ಉಲ್ಬಣವಾಗುತ್ತಿದೆ. ಸರ್ಕಾರದಿಂದ ಉಚಿತ ಲಸಿಕೆ ನೀಡುವುದು ವಿಳಂಬವಾಗುತ್ತಿದೆ. ಹೀಗಾಗಿ, ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿನ ಧರ್ಮ ನಿಧಿ, ಕಲ್ಯಾಣ ನಿಧಿಯಲ್ಲಿನ ಹಣ ತೆಗೆಯುವ ಮೂಲಕ ರಾಸುಗಳಿಗೆ ಮುಂಜಾಗ್ರತೆಯಾಗಿ ಲಸಿಕೆ ಹಾಕಿಸಬೇಕು ಎಂದು ಕೆಎಂಎಫ್‌ ನಿರ್ದೇಶಕ ಬಿ.ಸಿ. ಆನಂದ್‌ಕುಮಾರ್‌ ತಿಳಿಸಿದ್ದಾರೆ.

ತಾಲ್ಲೂಕಿನ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯ ನಿರ್ವಾಹಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಹಿತಿ ನೀಡಿದ್ದಾರೆ.

ರಾಸುಗಳು ಆರೋಗ್ಯವಾಗಿ ಉಳಿದರಷ್ಟೇ ಡೇರಿಗಳು ಲಾಭ ಮಾಡಲು ಸಾಧ್ಯ. ಸರ್ಕಾರದಿಂದ ಉಚಿತ ಲಸಿಕೆ ಬರುವವ ರೆಗೂ ಕಾದು ಕುಳಿತರೆ ರಾಸುಗಳಲ್ಲಿ ರೋಗ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. ರೋಗ ಹೆಚ್ಚಾಗಿರುವ ಗ್ರಾಮಗಳಿಗೆ ಬಮೂಲ್‌ನಿಂದ ತುರ್ತಾಗಿ ಲಸಿಕೆ ಕಳುಹಿಸಲಾಗಿದೆ. ಆದರೆ, ಇಡೀ ತಾಲ್ಲೂಕಿಗೆ ಲಸಿಕೆ ನೀಡಲು ಬಮೂಲ್‌ನಿಂದ ಕಷ್ಟವಾಗಲಿದೆ. ಡೇರಿಗಳಲ್ಲಿನ ಆಡಳಿತ ಮಂಡಳಿಗಳು ತುರ್ತು ಸಭೆ ನಡೆಸುವ ಮೂಲಕ ಚರ್ಮಗಂಟು ರೋಗ ತಡೆಯಲು ಲಸಿಕೆ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.