ADVERTISEMENT

ದೊಡ್ಡಬಳ್ಳಾಪುರ| ಮಕ್ಕಳ ದಿನಾಚರಣೆ: ವೇಷಭೂಷಣದಲ್ಲಿ ಮಿಂಚಿದ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 2:07 IST
Last Updated 15 ನವೆಂಬರ್ 2025, 2:07 IST
ದೊಡ್ಡಬಳ್ಳಾಪುರ ಬ್ಲೂಮ್ಸ್‌ ಟೆಕ್ನೋ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಬ್ಲೂಮ್ಸ್ ಭಾಷೋತ್ಸವದಲ್ಲಿ ಮಕ್ಕಳು ಕನ್ನಡ ನಾಡಿನ ಮಹನೀಯರ ವೇಷ ಧರಿಸಿ ಗಮನ ಸೆಳೆದರು
ದೊಡ್ಡಬಳ್ಳಾಪುರ ಬ್ಲೂಮ್ಸ್‌ ಟೆಕ್ನೋ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಬ್ಲೂಮ್ಸ್ ಭಾಷೋತ್ಸವದಲ್ಲಿ ಮಕ್ಕಳು ಕನ್ನಡ ನಾಡಿನ ಮಹನೀಯರ ವೇಷ ಧರಿಸಿ ಗಮನ ಸೆಳೆದರು   

ದೊಡ್ಡಬಳ್ಳಾಪುರ: ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಜನ್ಮ ದಿನದಂದು ಮಕ್ಕಳ ದಿನಾಚರಣೆಯನ್ನು ತಾಲ್ಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮಕ್ಕಳ ದಿನಾಚರಣೆ ಅಂಗವಾಗಿ ಶಾಲೆಗಳಲ್ಲಿ ಮಕ್ಕಳು ವಿವಿಧ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ನೆಹರೂ ಅವರ ಸಾಧನೆ, ಮಕ್ಕಳ ಬಗ್ಗೆ ನೆಹರೂ ಅವರಿಗಿದ್ದ ಪ್ರೀತಿ ಆದರಗಳನ್ನು ಗಣ್ಯರು ಸ್ಮರಿಸಿದರು.

ನಗರದ ಹೊರವಲಯದ ಪಾಲನಜೋಗಿಹಳ್ಳಿ ಬ್ಲೂಮ್ಸ್‌ ಟೆಕ್ನೋ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ನಡೆದ ಬ್ಲೂಮ್ಸ್ ಭಾಷೋತ್ಸವದಲ್ಲಿ ಕನ್ನಡ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗಳ ಉಗಮ, ಸಾಹಿತ್ಯ ಹಾಗೂ ಸಂಸ್ಕೃತಿ ಪ್ರತಿನಿಧಿಸುವ ವಸ್ತು ಪ್ರದರ್ಶನ ನಡೆಯಿತು. ಶಾಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಕನ್ನಡ ವಿಭಾಗದಲ್ಲಿ ಮಕ್ಕಳು ಕನ್ನಡ ನಾಡಿನ ಇತಿಹಾಸ ಪುರುಷರು, ದಾಸವೇಣ್ಯರು, ಕವಿಗಳು ವಚನಕಾರರ ವೇಷ ಭೂಷಣಗಳೊಂದಿಗೆ ಗಮನ ಸೆಳೆದರು.

ADVERTISEMENT

ವಿದ್ಯಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಮುರಳಿ ಮಾತನಾಡಿ, ಮಕ್ಕಳು ದೇಶದ ಶಕ್ತಿ. ಅವರಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಹೊಣೆಗಾರಿಕೆಯಾಗಿದೆ. ಮಕ್ಕಳಿಗೆ ತರಗತಿಯಲ್ಲಿನ ಕಲಿಕೆಗಿಂತ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಈ ದಿಸೆಯಲ್ಲಿ ಬ್ಲೂಮ್ಸ್ ಭಾಷೋತ್ಸವದಲ್ಲಿ ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳೇ ತಯಾರಿಸಿರುವ ವಿವಿಧ ಮಾದರಿ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಶಾಲೆ ಮುಖ್ಯ ಶಿಕ್ಷಕಿ ಬಿ.ಟಿ.ದೀಪ್ತಿ, ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ನಗರದ ಹೊರವಲಯದ ಜಯನಗರದ ಇಂಡಿಯನ್‌ ಪ್ರೈಡ್‌ ಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ವೇಷಭೂಷಣ ಧರಿಸಿ ಸಂಭ್ರಮಿಸಿದರು.

ವಿದ್ಯಾರ್ಥಿಗಳು ವಿವಿಧ ವೇಷಭೂಷಣ ಧರಿಸಿ ಸಂಭ್ರಮಿಸಿದರು
ಬಾಶೆಟ್ಟಿಹಳ್ಳಿ ಅಜಾಕ್ಸ್‌ ಪಬ್ಲಿಕ್‌ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ವೇಷಭೂಷಣ ಧರಿಸಿ ಸಂಭ್ರಮಿಸಿದರು