ADVERTISEMENT

ಹಣ್ಣು ಮಾಗಿಸುವ ಘಟಕಕ್ಕೆ ಸಹಾಯಧನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 14:46 IST
Last Updated 23 ಜನವರಿ 2025, 14:46 IST

ಚಿಂತಾಮಣಿ: ಇಥಲೀನ್ ಗ್ಯಾಸ್ ಬಳಕೆ ಮಾಡಿಕೊಂಡು ತೋಟಗಾರಿಕೆ ಬೆಳೆಗಳ ಹಣ್ಣು ಮಾಗಿಸುವ ಘಟಕ ನಿರ್ಮಾಣಕ್ಕೆ ಸಹಾಯ ನೀಡಲು ತೋಟಗಾರಿಕೆ ಇಲಾಖೆ ಅರ್ಜಿ ಆಹ್ವಾನಿಸಿದೆ.

ರೈತರು ಬಂಡವಾಳ ಭರಿಸಲು ಕಷ್ಟವಾಗುತ್ತದೆ ಎಂಬುದನ್ನು ಮನಗಂಡು ಬೆಂಗಳೂರಿನ ಐಐಎಚ್‌ಆರ್ ಸಂಸ್ಥೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕಡಿಮೆ ವೆಚ್ಚದ ಹಾಗೂ ಸುಲಭವಾಗಿ ಬಳಸಬಹುದಾದ ಹಣ್ಣು ಮಾಗಿಸುವ ತಾಂತ್ರಿಕತೆ ಅಭಿವೃದ್ಧಿಪಡಿಸಿದೆ.

ಹಣ್ಣು ಮಾಗಿಸುವ ಘಟಕ ನಿರ್ಮಾಣಕ್ಕೆ ಫಲಾನುಭವಿಗೆ 0.2 ರಿಂದ 2 ಹೆಕ್ಟೇರ್ ವಿಸ್ತೀರ್ಣಕ್ಕೆ ಒಂದು ಟನ್ ಸಾಮರ್ಥ್ಯದ ಹಣ್ಣು ಮಾಗಿಸುವ ಘಟಕ ವೆಚ್ಚ ₹6,500, ಶೇ.50 ರಂತೆ ₹3,250 ರೂ ಸಹಾಯಧನ ನೀಡಲಾಗುವುದು. ಪ್ರತಿ ಫಲಾನುಭವಿಗೆ ಎರಡು ಘಟಕಗಳಿಗೆ ಸಹಾಯಧನ ನೀಡಲಾಗುವುದು. ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.