ADVERTISEMENT

ಕೊರೊನಾ: ತಮಿಳುನಾಡಿಗೆ ರಾಜ್ಯದ ವಾಹನಗಳಿಗಿಲ್ಲ ಪ್ರವೇಶ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 14:43 IST
Last Updated 23 ಮಾರ್ಚ್ 2020, 14:43 IST
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ತಮಿಳುನಾಡು ಪೊಲೀಸರು ವಾಹನಗಳ ಸಂಚಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಕಿ.ಮೀ.ಗಟ್ಟಲೇ ವಾಹನಗಳ ಸಾಲು ಕಂಡು ಬಂದಿತು
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ತಮಿಳುನಾಡು ಪೊಲೀಸರು ವಾಹನಗಳ ಸಂಚಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಕಿ.ಮೀ.ಗಟ್ಟಲೇ ವಾಹನಗಳ ಸಾಲು ಕಂಡು ಬಂದಿತು   

ಆನೇಕಲ್:ರಾಜ್ಯದವಾಹನಗಳಿಗೆ ತಮಿಳುನಾಡು ಪ್ರವೇಶಿಸಲು ತಮಿಳುನಾಡು ಪೊಲೀಸರು ಅವಕಾಶ ನೀಡದ್ದರಿಂದ ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸುಮಾರು 3 ಕಿ.ಮೀ.ಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಲಾರಿಗಳು, ಕಂಟೈನರ್‌ಗಳು, ಟಿಪ್ಪರ್‌, ಕಾರು, ದ್ವಿಚಕ್ರ ವಾಹನಗಳು ಸೇರಿದಂತೆ ಅತ್ತಿಬೆಲೆ ಗಡಿಗೋಪುರದಿಂದ ಭಾರತ್‌ ಬೆಂಜ್‌ ಕಂಪನಿವರೆಗೂ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಮಧ್ಯಾಹ್ನದ ನಂತರ ಪೊಲೀಸರು ತಪಾಸಣೆ ನಡೆಸಿ ವಾಹನಗಳಿಗೆ ಸೋಂಕು ನಿವಾರಕ ಔಷಧ ಸಿಂಪಡಿಸಿ ತಮಿಳುನಾಡಿನತ್ತ ಬಿಡಲು ಒಪ್ಪಿಗೆ ನೀಡಿದರು.

ತಮಿಳುನಾಡಿನ ಬಸ್‌ಗಳಲ್ಲಿ ಗಡಿಗೋಪುರದವರೆಗೂ ಬರುವ ಜನರು ಅಲ್ಲಿಂದ ನಡೆದುಕೊಂಡು ಅತ್ತಿಬೆಲೆ ಬಸ್‌ ನಿಲ್ದಾಣಕ್ಕೆ ಬಂದು ಬೆಂಗಳೂರಿನತ್ತ ತೆರಳುತ್ತಿದ್ದ ದೃಶ್ಯ ಕಂಡು ಬಂತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.