ADVERTISEMENT

ದೆಹಲಿಯಿಂದ ಹಿಂತಿರುಗಿದ್ದ ದೊಡ್ಡಬಳ್ಳಾಪುರದ ವ್ಯಕ್ತಿಗೆ ಕೊರೊನಾ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 9:18 IST
Last Updated 13 ಏಪ್ರಿಲ್ 2020, 9:18 IST
   
""

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ.

ಮಧುರೆ ಹೋಬಳಿ ಕೋಡಿಪಾಳ್ಯದ39 ವರ್ಷದ ವ್ಯಕ್ತಿಯೊಬ್ಬರುಉದ್ಯೋಗ ನಿಮಿತ್ತ ದೆಹಲಿಗೆ ಹೋಗಿದ್ದರು. ದೆಹಲಿಯಿಂದ ಬಂದ ನಂತರ ಹೋಂ ಕ್ವಾರಂಟೈನ್‌ನಲ್ಲಿದ್ದರು. ಎರಡು ದಿನಗಳಿಂದ ಕೆಮ್ಮು, ಜ್ವರ ಕಾಣಿಸಿಕೊಂಡಿದ್ದರಿಂದ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಸಂದರ್ಭ ಕೊರೊನಾ ಸೋಂಕು ದೃಢಪಟ್ಟಿದೆ.

ತಾಲ್ಲೂಕಿನಲ್ಲಿ ಪ್ರಥಮ ಕೊರೊನಾ ಸೋಂಕಿನ ಪ್ರಕರಣ ಇದಾಗಿದೆ. ಕೊರೊನಾ ಸೋಂಕು ಗ್ರಾಮದಲ್ಲಿ ಇತರರಿಗೆ ಹರಡದಂತೆ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ವ್ಯಕ್ತಿಯ ಮನೆಯಲ್ಲಿ ಹೆಂಡತಿ, ಮಗಳು ಇದ್ದಾರೆ. ವ್ಯಕ್ತಿಯ ಮನೆಯ ಸುತ್ತಲಿನ ನಿವಾಸಿಗಳ ಮೇಲೆಯು ತೀವ್ರ ನಿಗಾಯಿಡಲಾಗಿದೆ.

ADVERTISEMENT

ಗ್ರಾಮೀಣ ಜನರಲ್ಲಿ ಆತಂಕ:ತಾಲ್ಲೂಕಿನಗ್ರಾಮೀಣ ಪ್ರದೇಶಗಳಲ್ಲಿ ಲಾಕ್‌ಡೌನ್‌ ಆದೇಶ ಪಾಲನೆಗೆ ನಗರ ಪ್ರದೇಶಗಳಲ್ಲಿ ಕೊಟ್ಟಷ್ಟುಗಮನ ಕೊಟ್ಟಿರಲಿಲ್ಲ.ಆದರೆ ಈಗ ಗ್ರಾಮೀಣ ಭಾಗದಲ್ಲಿಯೇ ಕೊರೊನಾ ಸೋಂಕು ದೃಢಪಟ್ಟಿರುವುದು ರೈತಾಪಿ ಜನರಲ್ಲಿ ಆತಂಕವನ್ನು ಮೂಡಿಸಿದೆ.

ಆರೋಗ್ಯ ಇಲಾಖೆ ಯಡವಟ್ಟು: ಕೊರೊನಾ ಸೋಂಕು ದೃಢಪಟ್ಟಿರುವ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸುವಂತಿಲ್ಲ ಎನ್ನುವ ನಿಯಮ ಇದೆ. ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿದ್ಧಪಡಿಸಿರುವ ಸೋಂಕಿತ ವ್ಯಕ್ತಿ ಸಂಪೂರ್ಣ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆರೋಗ್ಯ ಇಲಾಖೆ ಮೇಲಧಿಕಾರಿಗಳಿಗೆ ವರದಿ ನೀಡಲೆಂದು ಸೋಂಕಿನ ವ್ಯಕ್ತಿಯ ಸಂಚಾರ, ಜಾತಿ, ಚಿಕಿತ್ಸೆ ವಿವರಗಳ ಮಾಹಿತಿಯನ್ನು ಸಿದ್ದಪಡಿಸಿದ್ದಾರೆ. ಆದರೆ ತಾಲ್ಲೂಕು ವೈದ್ಯಾಧಿಕಾರಿಗಳು ಸಹಿ ಹಾಕುವ ಮುನ್ನವೇ ಈ ಪತ್ರ ಬಹಿರಂಗವಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರತಿಕ್ರಿಯೆ ಪಡೆಯಲು 'ಪ್ರಜಾವಾಣಿ' ಪ್ರತಿನಿಧಿ ಹಲವರಿಗೆ ಫೋನ್ ಮಾಡಿದರು. ಆದರೆಆರೋಗ್ಯ ಇಲಾಖೆ ಅಧಿಕಾರಿಗಳು ದೂರವಾಣಿ ಕರೆಗಳನ್ನು ಸ್ವೀಕರಿಸಿಲಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಅರೋಗ್ಯ ಇಲಾಖೆಯ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.