ADVERTISEMENT

ನೀಲಗಿರಿ ತೋಪಿಗೆ ಬೆಂಕಿ: ಹಾನಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 22:12 IST
Last Updated 7 ಮಾರ್ಚ್ 2020, 22:12 IST
ತೋಪಿನಲ್ಲಿ ಬೆಂಕಿಯ ಕೆನ್ನಾಲಿಗೆ
ತೋಪಿನಲ್ಲಿ ಬೆಂಕಿಯ ಕೆನ್ನಾಲಿಗೆ   

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನಚನ್ನೋಹಳ್ಳಿ ಗ್ರಾಮದಲ್ಲಿ ಕಟಾವಾದ ನೀಲಗಿರಿ ತೋಪಿನಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದೆ.ಇದರಿಂದಗಿ 30 ಎಕರೆಗೂ ಅಧಿಕ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ಮಧ್ಯಾಹ್ನ 1 ಗಂಟೆ ವೇಳೆಗೆ ಕಾಣಿಸಿಕೊಂಡ ಬೆಂಕಿಯೂ ಕೆಲವೇ ಗಂಟೆಗಳಲ್ಲಿ ಎಲ್ಲೆಡೆ ವಿಸ್ತರಿಸಿಕೊಂಡಿತು. ನೀಲಗಿರಿಯ ಮರದ ದಿಮ್ಮಿಗಳು ಹಾಗೂ ಹುಲ್ಲುಗಾವಲು ಸುಟ್ಟು ಕರಕಲಾಗಿದೆ.ಪ್ರಾಣಿ–ಪಕ್ಷಿಗಳು ಕೂಡ ಈ ಬೆಂಕಿಗೆ ಆಹುತಿಯಾಗಿವೆ.ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ಪ್ರಜ್ವಲಿಸಿ, ದಟ್ಟ ಹೊಗೆ ಆವರಿಸಿಕೊಂಡ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

‘ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕ ಬೆಂಕಿ ಹಚ್ಚಿದ್ದಾರೆ. ಅರಣ್ಯ ಪ್ರದೇಶಕ್ಕೆ ಅಪಾರ ಹಾನಿಯಾಗಿದೆ’ ಎಂದುಸ್ಥಳೀಯ ನಿವಾಸಿ ಹರೀಶ್ಬೇಸರ ವ್ಯಕ್ತಪಡಿಸಿದರು.

ADVERTISEMENT

‘ರಾಮದೇವರ ಬೆಟ್ಟ ಹಲವು ಮರಗಿಡಗಳು ಹಾಗೂ ವಿವಿಧ ಜಾತಿಯ ಪ್ರಾಣಿ–ಪಕ್ಷಿಗಳನ್ನು ಹೊಂದಿರುವ ಸಣ್ಣ ಕಾಡು. ಕಿಡಿಗೇಡಿಗಳು ಈಗಾಗಲೇ ಇದನ್ನು ಬೆಂಕಿಯಿಂದ ಸುಟ್ಟಿದ್ದಾರೆ. ಅರಣ್ಯ ಪೋಷಿಸಬೇಕಾದ ಈ ಹೊತ್ತಲ್ಲಿ ಕಾಡುನಾಶ ಮಾಡುತ್ತಿದ್ದಾರೆ’ ಎಂದು ಪರಿಸರ ಪ್ರೇಮಿ ಕಿರಣ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.