ADVERTISEMENT

ವಿಭಿನ್ನ ಹವಾಗುಣದಲ್ಲಿ ಈರುಳ್ಳಿ ಬೆಳೆದ ರೈತ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 21:54 IST
Last Updated 8 ಮಾರ್ಚ್ 2020, 21:54 IST
ಹನುಮಂತರಾಯಪ್ಪನವರ ಹೊಲದಲ್ಲಿ ಬೆಳೆದಿರುವ ಈರುಳ್ಳಿ
ಹನುಮಂತರಾಯಪ್ಪನವರ ಹೊಲದಲ್ಲಿ ಬೆಳೆದಿರುವ ಈರುಳ್ಳಿ   

ದಾಬಸ್ ಪೇಟೆ: ಇಲ್ಲಿನ ಮಣ್ಣು ಮತ್ತು ಹವಾಗುಣಕ್ಕೆ ಹೊಂದಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರು
ವ್ಯಾಪ್ತಿಯ ಬಹುತೇಕ ರೈತರು ಈರುಳ್ಳಿ ಬೆಳೆಯಲು ಮುಂದಾಗುವುದಿಲ್ಲ. ಆದರೆ,ನೆಲಮಂಗಲ ಬಳಿಯ ಚನ್ನೋಹಳ್ಳಿಯ ರೈತ ಹನುಮಂತರಾಯಪ್ಪ ಈರುಳ್ಳಿ ಬೆಳೆದು ಯಶಸ್ವಿಯಾಗಿದ್ದಾರೆ.

‘ನಾವು ಮೊದಲು ಈ ಭಾಗದ ಎಲ್ಲ ರೈತರಂತೆಸೊಪ್ಪು, ತರಕಾರಿ ಬೆಳೆಯುತ್ತಿದ್ದೆವು. ಬಳ್ಳಾರಿ ಜಿಲ್ಲೆಯ ಇಟಗಿ ಗ್ರಾಮದ ಕೆಲವು ಈರುಳ್ಳಿ ಬೆಳೆಗಾರರು ನಮಗೆ ಪ್ರೋತ್ಸಾಹ ನೀಡಿದರು. ಇಟಗಿಯಿಂದಲೇ ‘ರೆಡ್ ಡೈಮಂಡ್’ ಬೀಜ ತಂದು, ಅಲ್ಲಿನವರನ್ನೇ ಕರೆಸಿ ಬಿತ್ತನೆ ಮಾಡಲಾಯಿತು’ ಎಂದು ಹನುಮಂತರಾಯಪ್ಪ ಹೇಳಿದರು.

ದೊರೆಯಿತು ಲಾಭ:‘ಮುಕ್ಕಾಲು ಎಕರೆಯಲ್ಲಿ ನಾಲ್ಕು ತಿಂಗಳ ಹಿಂದೆ ಈರುಳ್ಳಿ ಬಿತ್ತಲಾಯಿತು. 44 ಚೀಲ ಈರುಳ್ಳಿ ಸಿಕ್ಕಿತು. ಅದೇ ಸಂದರ್ಭದಲ್ಲಿ, ನೆರೆ ಹಾವಳಿಯಿಂದ ಉತ್ತರ ಕರ್ನಾಟಕದಲ್ಲಿನ ಬೆಳೆ ಹಾಳಾಯಿತು. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಯಿತು. ಖರ್ಚು ಕಳೆದು ₹1.60 ಲಕ್ಷ ಲಾಭ ದೊರೆಯಿತು’ ಎಂದು ಅವರು ಹೇಳಿದರು.

ADVERTISEMENT

‘ಈಗಒಂದು ಎಕರೆಯಲ್ಲಿ ಬೆಳೆ ಬಂದಿದೆ. ಬೆಲೆ ಕಡಿಮೆಯಾಗಿದ್ದರೂ, ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದೇನೆ’ ಎಂದು ಅವರು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.