ADVERTISEMENT

ರೇಷ್ಮೆ ಗೂಡು ಆವಕ ಪ್ರಮಾಣ ಇಳಿಮುಖ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 14:19 IST
Last Updated 12 ಮಾರ್ಚ್ 2019, 14:19 IST
ವಿಜಯಪುರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗೂಡು ತೂಕ ಮಾಡುತ್ತಿರುವ ರೀಲರುಗಳು 
ವಿಜಯಪುರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗೂಡು ತೂಕ ಮಾಡುತ್ತಿರುವ ರೀಲರುಗಳು    

ವಿಜಯಪುರ: ತೀವ್ರ ಮಳೆ ಕೊರತೆಯಿಂದಾಗಿ ರೇಷ್ಮೆ ಬೆಳೆಗಾರರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಇದರಿದಾಗಿ ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣ ಕಡಿಮೆಯಾಗಿದೆ ಎಂದು ರೈತ ಮುನಿಕೃಷ್ಣಪ್ಪ ಹೇಳಿದರು.

ದಿನದಿಂದ ದಿನಕ್ಕೆ ಬಿಸಲಿನ ತಾಪಮಾನ ಹೆಚ್ಚಾಗುತ್ತಿದೆ. ಒಂದೊಂದು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಇದೆ. ಬೇಸಿಗೆ ಮುಗಿಯುವರೆಗೂ ರೇಷ್ಮೆಹುಳು ಸಾಕಾಣಿಕೆ ಬೇಡ ಎನ್ನುವ ಮನಸ್ಥಿತಿ ರೈತರದ್ದು.

ಬೋರ್‌ಗಳಲ್ಲಿನ ನೀರು ದಿನ ದಿನಕ್ಕೂ ಕಡಿಮೆಯಾಗುತ್ತಿದೆ. ಇದುವರೆಗೂ ಬರುತ್ತಿದ್ದ ನೀರಿಗೆ ಡ್ರಿಪ್‌ ಅಳವಡಿಸಿ, ಒಂದಷ್ಟು ಹಿಪ್ಪುನೇರಳೆ ಸೊಪ್ಪು ಬೆಳೆಯಲಾಗುತ್ತಿತ್ತು. ಈಗ ಅದನ್ನು ಬಿಟ್ಟರೆ ಬೇರೆ ದಾರಿ ಇಲ್ಲ ಎನ್ನುತ್ತಾರೆರೈತ ನಂಜುಂಡಪ್ಪ.

ADVERTISEMENT

ಎಷ್ಟೇ ಉತ್ತಮ ಗುಣಮಟ್ಟದ ಗೂಡು ಬೆಳೆದರೂ ₹400ಕ್ಕೂ ಬೆಲೆ ಏರಿಕೆಯಾಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನೂಲು ಬಿಚ್ಚಾಣಿಕೆದಾರ ಸಾದಿಕ್‌ಪಾಷ ಮಾತನಾಡಿ, ಬಿಚ್ಚಾಣಿಕೆ ಮಾಡುವ ರೇಷ್ಮೆನೂಲಿನ ಬೆಲೆ ಒಂದು ಕೆ.ಜಿ.ಗೆ ₹4 ಸಾವಿರ ಇದ್ದು, ಏಕಾಏಕಿ ₹2,600ಕ್ಕೆ ಇಳಿಕೆಯಾಗಿದೆ. ಇದರಿಂದ ಗೂಡು ಖರೀದಿ ಮಾಡಲು ಮನಸ್ಸಿಲ್ಲದಂತಾಗಿದೆ. ಸರ್ಕಾರ ಕೆ.ಎಸ್.ಎಂ.ಬಿ.(ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್) ಮೂಲಕ ರೇಷ್ಮೆನೂಲು ಖರೀದಿ ಮಾಡುತ್ತಿಲ್ಲ. ಇದರಿಂದ ಮಾರುಕಟ್ಟೆ ಸಮಸ್ಯೆ ಎದುರಾಗಿದೆ ಎಂದರು.

ನೂಲು ಬಿಚ್ಚಾಣಿಕೆ ಮಿಷನ್ ಅಳವಡಿಸಲು ₹1 ಕೋಟಿಗೂ ಅಧಿಕ ಬಂಡವಾಳ ಅವಶ್ಯ. ಗೂಡು ಖರೀದಿ ಮಾಡಲ ಹಣವಿಲ್ಲದ ರೀಲರುಗಳು ಕೋಟಿಗಟ್ಟಲೇ ಬಂಡವಾಳ ಹೂಡಲು ಸಾಧ್ಯವಿದೆಯೇ. ಇದರಿಂದ ಬೆರಳೆಣಿಕೆಯಷ್ಟು ರೀಲರ್‌ಗಳು ಮಾತ್ರ ಈ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.

ನೂಲು ಬಿಚ್ಚಾಣಿಕೆ ಮಾಡುವ ಘಟಕಗಳಿಗೆ ಸೋಲಾರ್ ಅಳವಡಿಸಲು ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಆದರೆ, ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.