ADVERTISEMENT

ಸೂಲಿಬೆಲೆ: ಬಾವಿಗೆ ಬಿದ್ದ ಜಿಂಕೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 1:49 IST
Last Updated 23 ಜುಲೈ 2025, 1:49 IST
ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಬೇಗೂರು ಸಮೀಪದ ಬಾವಿಯಲ್ಲಿ ರಕ್ಷಣೆ ಮಾಡಿದ ಜಿಂಕೆ ಮರಿಯನ್ನು ಮುತ್ಸಂದ್ರ ಅರಣ್ಯ ಪ್ರದೇಶದಲ್ಲಿ ಬಿಟ್ಟ ಅರಣ್ಯ ಇಲಾಖಾ ಸಿಬ್ಬಂದಿ.
ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಬೇಗೂರು ಸಮೀಪದ ಬಾವಿಯಲ್ಲಿ ರಕ್ಷಣೆ ಮಾಡಿದ ಜಿಂಕೆ ಮರಿಯನ್ನು ಮುತ್ಸಂದ್ರ ಅರಣ್ಯ ಪ್ರದೇಶದಲ್ಲಿ ಬಿಟ್ಟ ಅರಣ್ಯ ಇಲಾಖಾ ಸಿಬ್ಬಂದಿ.   

ಸೂಲಿಬೆಲೆ(ಹೊಸಕೋಟೆ): ತಾಲ್ಲೂಕಿನ ಸೂಲಿಬೆಲೆ ಸಮೀಪದ ಬೇಗೂರು ಗ್ರಾಮದ ಬಳಿ ಹಾಳು ಬಾವಿಯಲ್ಲಿ ಬಿದ್ದಿದ್ದ ಜಿಂಕೆ ಮರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿ ಮರಳಿ ಕಾಡಿಗೆ ಬಿಟ್ಟಿದ್ದಾರೆ.

ಆಹಾರ ಹುಡುಕಿ ಬಂದ ಜಿಂಕೆ ಮರಿಯೊಂದು ಭಾನುವಾರ ಬೆಳಗ್ಗೆ ದಾರಿ ತಪ್ಪಿ ಬಾವಿಗೆ ಬಿದ್ದಿತ್ತು. ಇದನ್ನು ಗಮನಿಸಿದ ಬೇಗೂರು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅರಣ್ಯಾಧಿಕಾರಿ ಪುಷ್ಪಾ ಹಾಗೂ ಸಿಬ್ಬಂದಿ ಜಿಂಕೆ ಮರಿಯನ್ನು ರಕ್ಷಿಸಿ ಮುತ್ಸಂದ್ರ ಅರಣ್ಯ ಪ್ರದೇಶಕ್ಕೆ ಬಿಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.