ADVERTISEMENT

ಡಚ್‌ ಮಾದರಿ ಗುಲಾಬಿಗೆ ಬೇಡಿಕೆ, ವಿದೇಶಗಳಿಗೂ ರಫ್ತು

ಬೆಂಗಳೂರು ಸುತ್ತಮುತ್ತ ಬೆಳೆಯುವ ಗುಲಾಬಿ

ವಡ್ಡನಹಳ್ಳಿ ಬೊಜ್ಯನಾಯ್ಕ
Published 14 ಫೆಬ್ರುವರಿ 2021, 3:52 IST
Last Updated 14 ಫೆಬ್ರುವರಿ 2021, 3:52 IST
ಬಂಡಲ್ ಮಾಡುತ್ತಿರುವ ಗುಲಾಬಿ ಹೂ.
ಬಂಡಲ್ ಮಾಡುತ್ತಿರುವ ಗುಲಾಬಿ ಹೂ.   

ದೇವನಹಳ್ಳಿ: ಬೆಂಗಳೂರು ಸುತ್ತಮುತ್ತ ಬೆಳೆಯುವ ಗುಲಾಬಿ ವಿದೇಶಗಳಿಗೂ ರಫ್ತಾಗುತ್ತದೆ. ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ವಿವಿಧ 12 ತಳಿಯ ಗುಲಾಬಿಯನ್ನು ರೈತರು ಬೆಳೆಯುತ್ತಾರೆ. ದೇವನಹಳ್ಳಿ ತಾಲ್ಲೂಕಿನಲ್ಲಿ ತುಸು ಹೆಚ್ಚಾಗಿಯೇ ಬೆಳೆಯುತ್ತಾರೆ.

ಪಾಲಿಹೌಸ್ ನಲ್ಲಿ ಬೆಳೆಯುವ ಗುಣಮಟ್ಟದ ಪ್ರತಿ 20 ಹೂವಿನ ಗೊಂಚಲಿಗೆ ₹400 ಇದೆ. ಬಯಲು ಪ್ರದೇಶದಲ್ಲಿ ಬೆಳೆದ ಗುಲಾಬಿಗೆ ಪ್ರತಿ ಗೊಂಚಲು ₹100. ಮಧ್ಯವರ್ತಿಗಳಿಗೆ ಮತ್ತು ಗ್ರಾಹಕರಿಗೆ ದುಬಾರಿ ಬೆಲೆ ಹೊರತು; ರೈತರಿಗೆ ಬಂಡವಾಳ ಸಿಗು
ವುದು ಕಷ್ಟಕರವಾಗಲಿದೆ ಎಂಬುದು ರೈತರ ಅಳಲು.

ಬಹುಬೇಡಿಕೆ ವಿವಿಧ ತಳಿ ಗುಲಾಬಿ ಹೂವುಗಳಿಗೆ ಕಳೆದ ವರ್ಷ ಮಾರ್ಚ್ 21ರವರೆಗೆ ಯಾವುದೇ ಅಡ್ಡಿ ಇಲ್ಲದೆ ಮಾರಾಟಕ್ಕೆ ಸಾಗಣೆ ಮಾಡುತ್ತಿದ್ದರು. ಕೊರೊನಾದಿಂದ ವಿಪರೀತ ನಷ್ಟ ಅನುಭವಿಸಿದರು. ಈಗ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದೆ ಎನ್ನುತ್ತಾರೆ ರೈತರು.

ADVERTISEMENT

ಫೆ.14ರಂದು ಪ್ರೇಮಿಗಳ ದಿನ: ಪ್ರೇಮಿಗಳ ನೆಚ್ಚಿನ ತಾಣ ನಂದಿ ಗಿರಿಧಾಮಕ್ಕೆ ಬರುವ ಯುವ ಜನರು ಗುಲಾಬಿ ಖರೀದಿಗಾಗಿ ದೇವನಹಳ್ಳಿ ಮಾರುಕಟ್ಟೆಗೆ ಹೋಗುತ್ತಾರೆ. ತಾಜ್ ಮಹಲ್ ಲಾಲ್ ಗುಲಾಬಿ ಮತ್ತು ಡಚ್ ಗುಲಾಬಿಗೆ ಮಾರುಹೋಗಿ ಗೊಂಚಲು ಗಟ್ಟಲೆ ಖರೀದಿಸುತ್ತಾರೆ. ಅಂದು ಕನಿಷ್ಠ ₹50ರಿಂದ ₹60ಲಕ್ಷ ವಹಿವಾಟು ನಡೆಯಲಿದೆ ಎನ್ನುತ್ತಾರೆ ಗುಲಾಬಿ ಹೂವು ಮಾರಾಟಗಾರ ರಾಜಣ್ಣ.

ಕೊರೊನಾ ಸೋಂಕಿನಿಂದಾಗಿ ಕಳೆದ ವರ್ಷ 20ಲಕ್ಷ ನಷ್ಟವಾಗಿದೆ. ಪರಿಹಾರವೂ ಸಿಕ್ಕಿಲ್ಲ ಎನ್ನುತ್ತಾರೆ ಬೆಳೆಗಾರ ಅಗಲಕೋಟೆ ನರೇಂದ್ರ.

ಕಳೆದ ವರ್ಷ ಕೊರೊನಾ ಸೋಂಕಿನ ಪರಿಣಾಮ ಹೂವು ತರಕಾರಿ ಬೆಳೆಯುವ ರೈತರಿಗೆ ನಷ್ಟವಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ. ತೋಟಗಾರಿಕೆ ಕ್ಷೇತ್ರ ನಿಧಾನವಾಗಿ ಸುಧಾರಣೆಯಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಹಾಂತೇಶ ಮುರಗೋಡ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.