
ದೇವನಹಳ್ಳಿ: ತಾಲ್ಲೂಕು ಆಸ್ಪತ್ರೆಯಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಕೆ.ಎಚ್. ಮುನಿಯಪ್ಪ ಅವರು ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದರು.
ಪ್ರತಿನಿತ್ಯ ಆಸ್ಪತ್ರೆಗೆ 400ಕ್ಕೂ ಹೆಚ್ಚು ರೋಗಿಗಳು ತಪಾಸಣೆಗೆ ಆಗಮಿಸುತಿದ್ದು, ವೈದ್ಯರ ಮೇಲೆ ಒತ್ತಡ ಇದ್ದರೂ ಅಗತ್ಯದಷ್ಟು ಸಿಬ್ಬಂದಿ ಇರುವುದರಿಂದ ಉತ್ತಮ ಸೇವೆ ದೊರೆಯುತ್ತಿದೆ. ನೂರು ಹಾಸಿಗೆ ಸಾಮರ್ಥ್ಯದ ತಾಯಿ ಮಕ್ಕಳ ಆಸ್ಪತ್ರೆಯೂ ಕಾರ್ಯನಿರ್ವಹಿಸುತಿದ್ದು, ಮೂಲ ಸೌಕರ್ಯ ಹೆಚ್ಚಿಸಲಾಗುವುದು ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಸಾರ್ವಜನಿಕರ ಒತ್ತಾಯದ ಮೇರೆಗೆ ಶೀಘ್ರದಲ್ಲಿಯೇ ಕಿದ್ವಾಯಿ ಆಸ್ಪತ್ರೆ ಸಹಯೋಗದೊಂದಿಗೆ ಕ್ಯಾನ್ಸರ್ ತಪಾಸಣಾ ಶಿಬಿರ ಆಯೋಜಿಸಲು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವರೊಂದಿಗೆ ಸಮಾಲೋಚಿಸಲಾಗುವುದು ಎಂದರು.
ಆಸ್ಪತ್ರೆಗೆ ಬರುವ ಹೊರ ರೋಗಿಗಳ ತಪಾಸಣಾ ಶುಲ್ಕ ₹5 ಇದ್ದು ಬೇರೆ ಸಾರ್ವಜನಿಕ ಆಸ್ಪತ್ರೆಗಳಲ್ಲಿರುವಂತೆ ₹10 ಹೆಚ್ಚಿಸಲು ಸಮಿತಿಯಲ್ಲಿ ತೀರ್ಮಾನಿಸಲಾಯಿತು ಎಂದು ಮಾಹಿತಿ ನೀಡಿದರು.
ಕುಡಿಯುವ ನೀರಿಗೆ ತಕ್ಷಣ ಬೋರ್‌ವೇಲ್ ಕೊರೆಯುವುಸದರೊಂದಿಗೆ, ಆಸ್ಪತ್ರೆ ತ್ಯಾಜ್ಯ ಹೊರ ಹೋಗುವ ಚರಂಡಿ ಸರಿಪಡಿಸಲು ಸೂಚಿಸಲಾಗಿದೆ. ಅವೈಜ್ಞಾನಿಕವಾಗಿರುವ ಶವಾಗಾರದ ರ‍್ಯಾಂಪ್ ಸರಿಪಡಿಸಲು ಹಾಗೂ ಆಸ್ಪತ್ರೆ ಆವರಣಕ್ಕೆ ಬರುವ ನಾಯಿಗಳ ನಿಯಂತ್ರಣಕ್ಕೂ ಸೂಚಿಸಲಾಗಿದೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ರಾಜಣ್ಣ, ತಾಲೂಕು ಅಧ್ಯಕ್ಷ ಜಗನ್ನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.