
ವಿಜಯಪುರ (ದೇವನಹಳ್ಳಿ): ತಾಲ್ಲೂಕಿನ ಒಟ್ಟು 139 ದೇವಾಲಯಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆ ₹5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಪಟ್ಟಣದ ದೇವಾಲಯಗಳಿಗೆ ₹19 ಲಕ್ಷ ಮೀಸಲಿಡಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದೇವತೆ ಹಾಗೂ ಗಂಗಾತಾಯಿ ದೇವಾಲಯಕ್ಕೆ ತಲಾ ₹5 ಲಕ್ಷ, ನಗರೇಶ್ವರ ಹಾಗೂ ಆದಿನಾರಾಯಣ ದೇವಾಲಯಕ್ಕೆ ತಲಾ ₹3 ಲಕ್ಷ, ವೀರಭದ್ರ, ಬಸವೇಶ್ವರ ಹಾಗೂ ವೀರೇಂದ್ರ ದೇಶಿಕೇಂದ್ರ ದೇವಾಲಯ ಅಭಿವೃದ್ಧಿಗೆ ತಲಾ ₹2 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಪುರಸಭೆ ಸದಸ್ಯ ರಾಜಣ್ಣ, ಸಂಪತ್ ಕುಮಾರ್, ಮುನಿವೆಂಕಟರಮಣ, ಎನ್.ರುದ್ರಮೂರ್ತಿ, ಪಿ.ಮುರಳಿಧರ್, ಪ್ರವೀಣ್, ನಂಜಣ್ಣ, ವಿ. ಪ್ರಭುದೇವ್, ಕಾರ್ಯದರ್ಶಿ ವಿ.ವಿಶ್ವನಾಥ್, ಸಿ.ಸುರೇಶ್ ಬಾಬು ಹಾಜರಿದ್ದರು.
ಶಿಷ್ಟಾಚಾರ ಉಲ್ಲಂಘನೆ ಪುರಸಭೆ ವ್ಯಾಪ್ತಿಗೆ ಬರುವ ಮುಜುರಾಯಿ ಇಲಾಖೆಗೆ ಸೇರಿದ ವಿವಿಧ ದೇವಾಲಯಗಳ ಅಭಿವೃದ್ಧಿ ಕಾರ್ಯ ಸ್ವಾಗತರ್ಹ. ಆದರೆ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತಾರದೆ ಕೆಪಿಸಿಸಿ ಕಾರ್ಯದರ್ಶಿವಿ.ಮಂಜುನಾಥ್ ಹಾಗೂ ಎಂಜಿನಿಯರ್‌ಗಳು ದೇವಾಲಯಗಳಿಗೆ ಭೇಟಿ ನೀಡಿರುವುದು ಶಿಷ್ಟಚಾರ ಉಲ್ಲಂಘನೆಯಾಗಿದೆ ಎಂದು ಹಲವು ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.