ADVERTISEMENT

ವಿಲೇವಾರಿಯಾಗದ ಕಸ: ಜನರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 13:16 IST
Last Updated 12 ಅಕ್ಟೋಬರ್ 2019, 13:16 IST
ಸೂಲಿಬೆಲೆಯ ಜನತಾ ಕಾಲೊನಿ ಜಂಗಮಕೋಟೆ ಮುಖ್ಯರಸ್ತೆಯಲ್ಲಿರುವ ಕಸದ ತೊಟ್ಟಿಯಲ್ಲಿ ಕಸ ವಿಲೇವಾರಿಯಾಗದೆ ತುಂಬಿ ಹೊರ ಚೆಲ್ಲಿರುವುದು
ಸೂಲಿಬೆಲೆಯ ಜನತಾ ಕಾಲೊನಿ ಜಂಗಮಕೋಟೆ ಮುಖ್ಯರಸ್ತೆಯಲ್ಲಿರುವ ಕಸದ ತೊಟ್ಟಿಯಲ್ಲಿ ಕಸ ವಿಲೇವಾರಿಯಾಗದೆ ತುಂಬಿ ಹೊರ ಚೆಲ್ಲಿರುವುದು   

ಸೂಲಿಬೆಲೆ: ಇಲ್ಲಿನಜನತಾ ಕಾಲೊನಿಯ ಜಂಗಮಕೋಟೆ ಮುಖ್ಯರಸ್ತೆಯಲ್ಲಿರುವ ಕಸದ ತೊಟ್ಟಿಯಲ್ಲಿ ಕಸ ತುಂಬಿ ಹೊರ ಚೆಲ್ಲಿದ್ದರೂ ವಿಲೇವಾರಿಯಾಗದೇ ಕೊಳೆತು ನಾರುತ್ತಿದ್ದು ಜನ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ಸೂಕ್ತ ಸಮಯಕ್ಕೆ ಕಸ ವಿಲೇವಾರಿಯಾಗದ ಕಾರಣ ಸುತ್ತಲಿನ ಮನೆಗಳಿಗೆ ದುರ್ನಾತ ಹರಡಿದ್ದು, ಸಹಿಸಲಸಾಧ್ಯವಾಗಿದೆ. ಕಸದ ತೊಟ್ಟಿಗೆ ಕಸದೊಂದಿಗೆ ಪ್ಲಾಸ್ಟಿಕ್ ಪೇಪರ್‌ಗಳನ್ನೂ ಹಾಕಿದ್ದು ಗಾಳಿ ಬೀಸಿದಾಗ ತೂರಿಕೊಂಡು ರಸ್ತೆಯಲ್ಲಿ ಓಡಾಡುವ ಜನ ಹಾಗು ವಾಹನಗಳ ಮೇಲೆ ಬೀಳುತ್ತಿದ್ದು, ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ. ಕಸ ವಿಲೇವಾರಿಯಾಗದಿರುವುದರಿಂದ ನಾಯಿಗಳ ಕಾಟ ಹೆಚ್ಚಾಗುತ್ತಿದ್ದು ರಸ್ತೆಯಲ್ಲಿ ಓಡಾಡುವವರಿಗೆ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT