ADVERTISEMENT

ದೊಡ್ಡತುಮಕೂರು ವಿಎಸ್‌ಎಸ್‌ಎನ್‌ ಚುನಾವಣೆ

​ಪ್ರಜಾವಾಣಿ ವಾರ್ತೆ
Published 18 ಮೇ 2025, 14:52 IST
Last Updated 18 ಮೇ 2025, 14:52 IST
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡತುಮಕೂರು ದೊಡ್ಡತುಮಕೂರು ವಿಎಸ್‌ಎಸ್‌ಎನ್‌ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ–ಜೆಡಿಎಸ್‌ ಬೆಂಬಲಿತ ನಿರ್ದೇಶಕರು. ಶಾಸಕ ಧೀರಜ್‌ ಮುನಿರಾಜು ಇದ್ದರು  
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡತುಮಕೂರು ದೊಡ್ಡತುಮಕೂರು ವಿಎಸ್‌ಎಸ್‌ಎನ್‌ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ–ಜೆಡಿಎಸ್‌ ಬೆಂಬಲಿತ ನಿರ್ದೇಶಕರು. ಶಾಸಕ ಧೀರಜ್‌ ಮುನಿರಾಜು ಇದ್ದರು     

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರ ಸಂಘ(ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ)ದ ಆಡಳಿತ ಮಂಡಲಿಯ 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ಪ್ರಕಾಶ್, ಜೆ.ಬಿ.ಕೆಂಪಣ್ಣ, ಮುನಿನರಸಿಂಹಯ್ಯ, ಟಿ.ಎಂ.ಪ್ರಭಾಕರ್, ಮುನಿರಾಜು, ಟಿ.ಜಿ.ಮಂಜುನಾಥ, ಸುರೇಶ್, ಬೈಲಪ್ಪ, ಕೆ.ನಾರಾಯಣಸ್ವಾಮಿ, ತ್ರಿವೇಣಮ್ಮ, ಭಾಗ್ಯಮ್ಮ, ಪುರುಷೋತ್ತಮ್, ವಿಜೇತರಾಗಿದ್ದಾರೆ ಎಂದು ಎಂದು ಚುನಾವಣಧಿಕಾರಿ ಕೆ.ಎಸ್‌.ನಾಗಮಣಿ ತಿಳಿಸಿದ್ದಾರೆ.

ಶಾಸಕ ಧೀರಜ್‌ ಮುನಿರಾಜು, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗೇಶ‌, ಕೆ.ಬಿ.ಮುದ್ದಪ್ಪ, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ಮುಖಂಡರಾದ ತಿ.ರಂಗರಾಜು, ಬಿ.ಸಿ.ಆನಂದಕುಮಾರ್, ಡಾ.ಎಚ್‌.ಜಿ.ವಿಜಯಕುಮಾರ್‌ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.