ದೊಡ್ಡಬಳ್ಳಾಪುರ: ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವೀರಾಪುರ-ಮಜರಾಹೊಸಹಳ್ಳಿ ರಸ್ತೆಯಲ್ಲಿ ಕಾರು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.
ಬೈಕ್ ಸವಾರನ ತಲೆಗೆ ಹೆಲ್ಮೆಟ್ ಧರಿಸಿದ್ದರಿಂದ ಯಾವುದೇ ಪ್ರಾಣಾಪಾಯ ಇಲ್ಲದೆ ಪಾರಾಗಿದ್ದಾನೆ. ಬೈಕ್ ಕಾರಿಗೆ ಡಿಕ್ಕಿ ಹೊಡೆದ ರಬಸಕ್ಕೆ ಕಾರಿನ ಮುಂದಿನ ಭಾಗ ನಜ್ಜು ಗುಜ್ಜಾಗಿದೆ. ಬೈಕ್ ಸವಾರನ ಹೆಸರು ತಿಳಿದು ಬಂದಿಲ್ಲ.
ಮೂವರಿಗೆ ಗಾಯ: ಶಾಂತಿನಗರ ಮುಖ್ಯರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ಬರುವ ವೇಳೆ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡಿದ್ದಾರೆ.
ಕಚೇರಿ ಪಾಳ್ಯದ ನಿವಾಸಿಗಳಾ ಗಜೇಂದ್ರ, ಶಿವಕುಮಾರ್ ಹಾಗೂ ಅರೆಹಳ್ಳಿಗುಡ್ಡದಹಳ್ಳಿ ನಿವಾಸಿ ಪ್ರಮೋದ್ ಗಾಯಗೊಂಡವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.