ದೊಡ್ಡಬಳ್ಳಾಪುರ: ಸಿಬಿಎಸ್‌ಇ ಕೇಂದ್ರೀಯ ಪರೀಕ್ಷಾ ಮಂಡಳಿಯ 2024-25 ಸಾಲಿನ 10ನೇ ತರಗತಿ ಫಲಿತಾಂಶದಲ್ಲಿ ಈ ಬಾರಿಯೂ ನಗರದ ಗುರುಕುಲ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ಶೇ 100 ಫಲಿತಾಂಶ ಪಡೆದಿದೆ ಎಂದು ಪ್ರಾಂಶುಪಾಲ ಕೆ.ಎಸ್.ಲೋಕೇಶ್ ತಿಳಿಸಿದ್ದಾರೆ.
61 ವಿದ್ಯಾರ್ಥಿಗಳ ಪೈಕಿ 16 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಎನ್.ಎಸ್.ದಿಶಾಂತ್ ಶೇ 96.20, ತ್ರಿಲೋಕ್ ಭಾರ್ಗವ್ ಶೇ 95.80, ಗೌರವ್ ತೇಜ್ ಶೇ 94.20, ಇಂಚರ ಎಂ ಬಾಬು ಶೇ 94, ಕೆ.ವಿ.ಜಾಹ್ನವಿ ಶೇ 93.60, ಎನ್.ಲೋಚನ್ ಶೇ92.60, ಎಚ್. ಶಶಾಂಕ್ ಯಾದವ್ ಶೇ 91, ರಂಜನಾ ಎಸ್.ಹಿರೇಮಠ ಶೇ 90 ಅಂಕ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.