ADVERTISEMENT

ದೊಡ್ಡಬಳ್ಳಾಪುರ: ಸುಸ್ವರ ಟ್ರಸ್ಟ್ ವತಿಯಿಂದನಾಳೆ ಸಂಗೀತ ಗಾಯನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 2:58 IST
Last Updated 17 ಜನವರಿ 2026, 2:58 IST
<div class="paragraphs"><p>ಗಾಯನ ಸ್ಪರ್ಧೆ</p></div>

ಗಾಯನ ಸ್ಪರ್ಧೆ

   

ದೊಡ್ಡಬಳ್ಳಾಪುರ: ಸುಸ್ವರ ಟ್ರಸ್ಟ್ ವತಿಯಿಂದ ಫೆಬ್ರವರಿಯಲ್ಲಿ ನಡೆಯಲಿರುವ ಸಂಸ್ಥೆಯ 27ನೇ ವಾರ್ಷಿಕೋತ್ಸವ, ತ್ಯಾಗರಾಜ, ಪುರಂದರದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಶಾಸ್ತ್ರೀಯ ಸಂಗೀತ ಗಾಯನ ಸ್ಪರ್ಧೆ ಜ.18 ರಂದು ಬೆಳಿಗ್ಗೆ 10ಕ್ಕೆ ನಗರದ ಮುಖ್ಯ ರಸ್ತೆಯ ಸ್ವಾಮಿವಿವೇಕಾನಂದ ಶಾಲೆಯಲ್ಲಿ ನಡೆಯಲಿವೆ.

12 ವರ್ಷದೊಳಗಿನವರಿಗೆ 12 ರಿಂದ 18 ವರ್ಷದವರಿಗೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಮೂರು ವಿಭಾಗ ಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ಮೊ.8970076030, 9964228441.

ADVERTISEMENT

ಇಂದು ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ

ದೊಡ್ಡಬಳ್ಳಾಪುರ: ಡಾ.ಡಿ.ಆರ್‌.ನಾಗರಾಜ್‌ ಬಳಗ, ಆರ್‌.ಎಲ್‌.ಜಾಲಪ್ಪ ಸಮೂಹ ಸಂಸ್ಥೆಯಿಂದ ಜ.17 ರಂದು ಸಂಜೆ 4 ಗಂಟೆಗೆ ನಗರದ ಕನ್ನಡ ಜಾಗೃತ ಭವನದಲ್ಲಿ ಕಲಾ ತಪಸ್ವಿ ರುಮಾಲೆ ಚನ್ನಬಸವಯ್ಯ ಅವರ 115ನೇ ಜನ್ಮದಿನದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗು ಚಿತ್ರಗಳ ಪ್ರದರ್ಶನ ನಡೆಯಲಿದೆ.

ಬಹುಮಾನ ವಿತರಣೆ ಸಮಾರಂಭದಲ್ಲಿ ವಾಣಿಜ್ಯೋದಮಿ ರುಮಾಲೆ ನಾಗರಾಜ್‌, ಕರ್ನಾಟಕ ಚಿತ್ರ ಕಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಪ್ಪಾಸಾಹೇಬ್‌ ಗಾಣಿಗರ್‌, ಆರ್‌.ಎಲ್‌.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಯ ಗೌರ್ವನಿಂಗ್‌ ಕೌನ್ಸಿಲ್‌ ಸದಸ್ಯ ಜೆ.ಆರ್‌.ರಾಕೇಶ್‌, ರಾಷ್ಟ್ರ ಪ್ರಶಸ್ತಿ ವಿಶೇಷ ಚಿತ್ರ ಕಲಾವಿದ ಆರ್‌.ರಂಗಸ್ವಾಮಿ, ಕನ್ನಡ ಜಾಗೃತ ಪರಿಷತ್‌ ಅಧ್ಯಕ್ಷ ಕೆ.ವೆಂಕಟೇಶ್‌, ಚಿತ್ರ ಕಲಾವಿದ ಎಂ.ಶಿವಕುಮಾರ್‌ ಭಾಗವಹಿಸಲಿದ್ದಾರೆ.

ಇಂದು ಮತದಾರರ ದಿನ ಜಾಥಾ

ದೊಡ್ಡಬಳ್ಳಾಪುರ: ಸ್ವಾಮಿವಿವೇಕಾನಂದರ ಜಯಂತಿ ಪ್ರಯುಕ್ತ ಶ್ರಮದಾನ ಮತ್ತು ಮತದಾರರ ದಿನದ ಪ್ರಯುಕ್ತ ನಗರದ ಪ್ರವಾಸಿ ಮಂದಿರ ದಿಂದ ಜ.17 ರಂದು ಬೆಳಿಗ್ಗೆ 9 ಗಂಟೆಗೆ ಜಾಥಾ ನಡೆಯಲಿದೆ.

 75 ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾಲೇಜು ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ನಗರಸಭೆ, ಯುವ ಸಂಚಲನ ತಂಡ ಸಹಯೋಗದಲ್ಲಿ ಜಾಥಾ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.