
ದೊಡ್ಡಬಳ್ಳಾಪುರ: ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಕಾಲ ಸೇವೆಗಳು ಸಾರ್ವಜನಿಕರ ಪಾಲಿಗೆ ಅಕಾಲವಾಗಿದ್ದು, ಉಳ್ಳವರಿಗಷ್ಟೇ ಸಕಾಲ ಸೇವೆ ಎನ್ನುವ ಸ್ಥಿತಿ ನಿರ್ಮಾಣ ಆಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಯಾವುದೇ ಖಾಸಗಿ ಕಂಪನಿ, ಕೈಗಾರಿಕೆ ಸೇರಿದಂತೆ ಎಲ್ಲಿಯೇ ಉದ್ಯೋಗಕ್ಕೆ ಸೇರಿದ ನಂತರ ಉದ್ಯೋಗಿಗಳ ಹಿನ್ನೆಯ ಕುರಿತು ಪೊಲೀಸ್ ವರದಿ ಅಗತ್ಯವಾಗಿದೆ. ಇದಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಅರ್ಜಿದಾರರು ವಾಸ ಮಾಡುತ್ತಿರುವ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ 7 ರಿಂದ 20 ದಿನಗಳ ಒಳಗೆ ಆನ್‌ಲೈನ್ ಮೂಲಕ ಬಂದಿರುವ ಅರ್ಜಿಯನ್ನು ಇತ್ಯರ್ಥಗೊಳಿಸಬೇಕು.
20 ದಿನಗಳು ಕಳೆದ ನಂತರ ಮತ್ತೆ ಹೊಸದಾಗಿಯೇ ಅರ್ಜಿ ಸಲ್ಲಿಬೇಕು. ಆದರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡದೆ ಅಥವಾ ಅರ್ಜಿದಾರರು ಬಂದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಅಲೆದಾಡಿಸುವ ಪ್ರವೃತ್ತಿ ಹೆಚ್ಚಾಗಿದೆ. ಸಕಾಲ ಕುರಿತು ಪ್ರಶ್ನೆ ಮಾಡಿದರೆ ಕ್ಷುಲ್ಲಕ ಕಾರಣ ನೀಡಿ ಅರ್ಜಿ ತಿರಸ್ಕರಿಸಲಾಗುತ್ತಿದೆ ಎಂದು ಉದ್ಯೋಗಾಂಕ್ಷಿಗಳು ದೂರಿದ್ದಾರೆ.
ಶೀಘ್ರ ಇತ್ಯಾರ್ಥಕ್ಕೆ ಸೂಚನೆ ಪಾಸ್‌ಪೋರ್ಟ್ ಪರಿಶೀಲನೆ ಸೇರಿದಂತೆ ಪೊಲೀಸ್ ಠಾಣೆಯ ಎಲ್ಲಾ ಸೇವೆಗಳು ಈಗ ಆನ್‌ಲೈನ್ ಮೂಲಕವೇ ಸಾರ್ವಜನಿಕರಿಗೆ ಲಭ್ಯವಾಗುತ್ತಿವೆ. ಸಕಾಲದಲ್ಲಿ ಬರುವ ಅರ್ಜಿಗಳ ಸೂಕ್ತ ವಿಲೇವಾರಿಗೆ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಕೆಲಸದ ಒತ್ತಡದಿಂದಾಗಿ ಕೆಲವೊಮ್ಮೆ ವಿಳಂಬವಾಗಿರಬಹುದು. ಈ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿ ಸಕಾಲ ಅರ್ಜಿಗಳನ್ನು ತ್ವರಿತ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು.ಸಾಧಿಕ್‌ಪಾಷ ಇನ್‌ಸ್ಪೆಕ್ಟರ್ ಗ್ರಾಮಾಂತರ ಪೊಲೀಸ್ ಠಾಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.