ADVERTISEMENT

ದೇವನಹಳ್ಳಿಯಲ್ಲಿ ನಾಯಿಗಳ ಹಾವಳಿ: ಸಾರ್ವಜನಿಕರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 15 ಮೇ 2021, 20:47 IST
Last Updated 15 ಮೇ 2021, 20:47 IST
ನಾಯಿ ದಾಳಿಗೆ ಒಳಗಾಗಿರುವ ಎಂ.ಎಸ್.ರಮೇಶ್
ನಾಯಿ ದಾಳಿಗೆ ಒಳಗಾಗಿರುವ ಎಂ.ಎಸ್.ರಮೇಶ್   

ದೇವನಹಳ್ಳಿ: ರಸ್ತೆಯಲ್ಲಿ ಸಂಚರಿಸುತ್ತಿರುವ ಸಾರ್ವಜನಿಕರ ಮೇಲೆ ಸಾಕು ನಾಯಿಗಳು ದಾಳಿ ಮಾಡುತ್ತಿದ್ದು, ಇದರಿಂದ ಹಲವು ಮಂದಿ ಗಾಯಗೊಂಡಿದ್ದಾರೆ.

ಪಟ್ಟಣದ 23ನೇ ವಾರ್ಡ್‌ನಲ್ಲಿ ಸಾಕು ನಾಯಿಗಳನ್ನು ಮನೆ ಆವರಣದಲ್ಲಿ ಕಟ್ಟಿಹಾಕುವುದರ ಬದಲಿಗೆ ಬೀದಿಗೆ ಬಿಟ್ಟಿರುವ ಕಾರಣ ರಸ್ತೆಯಲ್ಲಿ ಸಂಚರಿಸುವ ಜನರ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ.

ಸಾರ್ವಜನಿಕರು ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಯುವಿಹಾರಕ್ಕೆ ತೆರಳುವಾಗ ರಸ್ತೆಗೆ ಬರುವ ನಾಯಿಗಳು ಜನರ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ತಪ್ಪಿಸಿಕೊಳ್ಳಲಾಗದ ಜನರು ಭಯಭೀತರಾಗಿ ಓಡುವಾಗ ಹಿಂಬಾಲಿಸಿ ಕಚ್ಚುತ್ತಿವೆ. ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಕಚ್ಚಿ ಗಾಯಗೊಳಿಸುತ್ತಿರುವ ನಾಯಿಗಳನ್ನು ಪುರಸಭೆಯವರು ಹಿಡಿದು ಊರಿನಿಂದ ಹೊರಗೆ ಬಿಡಬೇಕು. ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ವಾಯುವಿಹಾರ ಮುಗಿಸಿ ವಾಪಸು ಬರುವಾಗ ನಾಯಿಗಳು ಅಟ್ಟಾಡಿಸಿಕೊಂಡು ಬಂದು ಕಚ್ಚಿ ಗಾಯಗೊಳಿಸಿವೆ. ತಪ್ಪಿಸಿಕೊಳ್ಳಲು ಹೋಗಿ ಕೈ ಮತ್ತು ಕಾಲಿಗೆ ಪೆಟ್ಟಾಗಿದೆ. ಮಾಲೀಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ರಮೇಶ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.