ADVERTISEMENT

ಸಮಾಜದ ಪ್ರಗತಿಗೆ ಶಿಕ್ಷಣವೇ ಮದ್ದು

ಶಿವನಾಪುರ ಪೀಠದ ಪ್ರಣವಾನಂದ ಪುರಿ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 10:09 IST
Last Updated 3 ಏಪ್ರಿಲ್ 2021, 10:09 IST
ಹೊಸಕೋಟೆಯಲ್ಲಿ ಆದಿಶಕ್ತಿ ಜನಜಾಗೃತಿ ಅಭಿಯಾನದ ವಿಜಯೋತ್ಸವ ನಿಮಿತ್ತ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಪ್ರಣವಾನಂದ ಪುರಿ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು
ಹೊಸಕೋಟೆಯಲ್ಲಿ ಆದಿಶಕ್ತಿ ಜನಜಾಗೃತಿ ಅಭಿಯಾನದ ವಿಜಯೋತ್ಸವ ನಿಮಿತ್ತ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಪ್ರಣವಾನಂದ ಪುರಿ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು   

ಹೊಸಕೋಟೆ: ‘ನಮಗೆ ಮನುಷ್ಯ ಜನ್ಮ ಸಿಕ್ಕಿದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಶಿವನಾಪುರದ ಆದಿಶಕ್ತಿ ಮಹಾಸಂಸ್ಥಾನ ಪೀಠದ ಪ್ರಣವಾನಂದ ಪುರಿ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಆದಿಶಕ್ತಿ ಜನಜಾಗೃತಿ ಯಾತ್ರೆಯ ವಿಜಯೋತ್ಸವದಲ್ಲಿ ಮಾತನಾಡಿದರು.

ತಾಲ್ಲೂಕು ಹಾಗೂ ಇತರೆ ಜಿಲ್ಲೆಗಳಲ್ಲಿ ನಡೆದ ಜನಜಾಗೃತಿ ಅಭಿಯಾನ ಯಶಸ್ವಿಯಾಗಿದೆ. ತಿಗಳ ಜನಾಂಗದ ಜನರು ಅದ್ಭುತವಾಗಿ ಅಭಿಯಾನದಲ್ಲಿ ಭಾಗವಹಿಸಿದ್ದಾರೆ ಎಂದರು.

ADVERTISEMENT

ಗುರುವಿನ ಜ್ಞಾನದಿಂದ ಜನರಿಗೆ ಶಕ್ತಿಯು ಸಿಗುತ್ತದೆ. ಜನರಿಗೆ ಜ್ಞಾನವೇ ಮುಖ್ಯ. ಜ್ಞಾನ ಸಂಪಾದನೆಗಾಗಿ ಎಲ್ಲರೂ ಗುರಿವಿನ ಮೊರೆ ಹೋಗಬೇಕು ಎಂದರು.

ಎಲ್ಲರಿಗೂ ಸಾವು ನಿಶ್ವಿತ. ಯಾರು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಸಾವು ಬರುವ ಮುನ್ನ ಒಳ್ಳೆಯ ಕೆಲಸ ಮಾಡಬೇಕು ಎಂದ ಅವರು, ಬೆಂಕಿಯಿಂದ ಹುಟ್ಟಿದ ಆದಿಶಕ್ತಿಯ ಆರಾಧಕರು ನಾವು. ಮುಂಚಿನ ಕಾಲದಲ್ಲಿ ನಮಗೆ ತೋಳ್ಬಲ ಬೇಕಾಗಿತ್ತು. ಆದರೆ, ಈಗ ಯುಕ್ತಿಯಿಂದ ಶಕ್ತಿ ಲಭಿಸುತ್ತದೆ. ಅಂತಹ ಯುಕ್ತಿಯನ್ನು ತಿಗಳ ಜನಾಂಗದವರು ಸಂಪಾದಿಸಬೇಕಾಗಿದೆ ಎಂದು ಸಲಹೆ ನೀಡಿದರು.

ತಿಗಳ ಜನಾಂಗದವರು ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಿದೆ. ಅದಕ್ಕಾಗಿ ಗುರುಪೀಠದ ಪರಿಚಯವಾಗಬೇಕಾಗಿದೆ ಎಂದರು.

ತಿಗಳ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸಿ. ಜಯರಾಜ್, ಮನೆಗೆ ದೇವರ ಮನೆಯು ಹೇಗೆ ಮುಖ್ಯವೋ, ಊರಿಗೆ ದೇವಾಲಯವೂ ಮುಖ್ಯ. ಹಾಗೆಯೇ ಒಂದು ಸಮಾಜಕ್ಕೆ ಗುರುಪೀಠ ಮತ್ತು ಸ್ವಾಮೀಜಿ ಮುಖ್ಯ ಎಂದು ತಿಳಿಸಿದರು.

ಸಮುದಾಯದ ಬಹಳ ದಿನಗಳ ಬೇಡಿಕೆಯಾಗಿದ್ದ ಗುರುಪೀಠ ಮತ್ತು ಸಮಾಜಕ್ಕೆ ಒಬ್ಬ ಗುರಿವಿನ ಅವಶ್ಯಕತೆಯು ಈಗ ಪೂರ್ಣವಾಗಿದೆ. ಎಲ್ಲರೂ ಆಗಾಗ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯ ಆಶೀರ್ವಾದ ಪಡೆಯಬೇಕು. ಹಾಗೂ ಗುರುಪೀಠಕ್ಕೆ ಕಾಣಿಕೆ ನೀಡಬೇಕು. ಆಗಲೇ ನಮ್ಮ ಮಠವು ಎಲ್ಲರಿಗೂ ಪರಿಚಯವಾಗಿ ಜನರಿಗೆ ಒಳ್ಳೆಯದಾಗುತ್ತದೆ ಎಂದರು.

ಮಠದಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ವಿದ್ಯಾಭ್ಯಾಸ ನೀಡುವ ವ್ಯವಸ್ಥೆ ಆಗಬೇಕು. ಇಲ್ಲಿಂದ ಸಮಾಜಕ್ಕೆ ಉತ್ತಮ ವ್ಯಕ್ತಿಗಳು ಹೊರಬರಬೇಕು ಎಂದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ಅರುಣ್ ಕುಮಾರ್‌, ತಾಲ್ಲೂಕು ತಿಗಳರ ಸಂಘದ ಅಧ್ಯಕ್ಷ ಸಿ. ಮುನಿಯಪ್ಪ, ಮುಖಂಡರಾದ ಲಕ್ಷ್ಮಣ್, ಬಾಲಚಂದ್ರ ಮಾತನಾಡಿದರು. ಕಾರ್ಯಕ್ರಮಕ್ಕೂ ಮುಂಚೆ ಸ್ವಾಮೀಜಿ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಯಿತು. ಪಾದಯಾತ್ರೆಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಎಚ್.ಜೆ. ರವೀಂದ್ರ, ಮೋಹನ್, ಶಂಕರ್‌, ಉಮೇಶ್, ಹೇಮಂತ ಕುಮಾರ್‌, ಉಮೇಶ್ಭಾ ಗವಹಿಸಿದ್ದರು. ಸ್ವಾಮೀಜಿ ಅವರನ್ನು ವಿಜಯ್ ಕುಮಾರ್‌ ನೇತೃತ್ವದಲ್ಲಿ ಸನ್ಮಾಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.