ADVERTISEMENT

ಗುಡಿಬಂಡೆ | ವಿದ್ಯುತ್ ಅವಘಡ: 700 ಬಾಳೆ ಗಿಡ ಬೆಂಕಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 14:16 IST
Last Updated 2 ಏಪ್ರಿಲ್ 2024, 14:16 IST
ಗುಡಿಬಂಡೆ ತಾಲ್ಲೂಕು ಅಪ್ಪೀರೆಡ್ಡಿಹಳ್ಳಿ ಬಳಿಯ ಬಾಳೆ ತೋಟದಲ್ಲಿ ಬೆಂಕಿ ನಂದಿಸುತ್ತಿರುವ ಅಗ್ನಿ ಶಾಮಕ ಸಿಬ್ಬಂದಿ
ಗುಡಿಬಂಡೆ ತಾಲ್ಲೂಕು ಅಪ್ಪೀರೆಡ್ಡಿಹಳ್ಳಿ ಬಳಿಯ ಬಾಳೆ ತೋಟದಲ್ಲಿ ಬೆಂಕಿ ನಂದಿಸುತ್ತಿರುವ ಅಗ್ನಿ ಶಾಮಕ ಸಿಬ್ಬಂದಿ   

ಗುಡಿಬಂಡೆ: ತಾಲ್ಲೂಕಿನ ಅಪ್ಪಿರೆಡ್ಡಿಹಳ್ಳಿ ಬಳಿ ಮಂಗಳವಾರ ಮಧ್ಯಾಹ್ನ ವಿದ್ಯುತ್ ಅವಘಢದಿಂದ ಬಾಳೆ ತೋಟಕ್ಕೆ ಬೆಂಕಿ ತಗಲಿ 700 ಗಿಡ, ಹನಿ ನೀರಾವರಿಗಾಗಿ ಅಳವಡಿಸಿದ್ದ ಪೈಪು ಇತರೆ ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ.

ತಾಲ್ಲೂಕಿನ ವರ್ಲಕೊಂಡ ಗ್ರಾಮ ಪಂಚಾಯಿತಿ ಅಪ್ಪಿರೆಡ್ಡಿಹಳ್ಳಿ ಬಳಿಯ ಬೆಂಗಳೂರು ಮೂಲದ ರಘುರೆಡ್ಡಿ ಎಂಬುವವರ ತೋಟದಲ್ಲಿ 60 ಗುಂಟೆ ಜಾಗದಲ್ಲಿ 700ಕ್ಕೂ ಹೆಚ್ಚು ಬಾಳೆ ಗಿಡ‌ ಬೆಳೆದಿದ್ದರು. ತೋಟದಲ್ಲಿ ಕಾವಲುಗಾರ ಗ್ರಾಮಕ್ಕೆ ಹೊಗಿರುವ ಸಮಯದಲ್ಲಿ ವಿದ್ಯುತ್ ಅವಘಢ ಸಂಭವಿಸಿ ತಂಗಿನ ಗೆರೆಗಳಿಗೆ ಬೆಂಕಿ ತಗಲಿ, ಬಾಳೆ ಗಿಡಗಳಿಗೂ ಬೆಂಕಿ ಹರಡಿದೆ. ಇದನ್ನು ಗಮನಿಸಿದ ಪಕ್ಕದ ತೋಟದವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಅವರು ಸ್ಥಳಕ್ಕೆ ಬರುಷ್ಟರಲ್ಲಿ ಅರ್ಧ ಫಸಲು ಬೆಂಕಿಗೆ ಅಹುತಿಯಾಗಿತು. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸದರೂ ಸಹ ಸಂಪೂರ್ಣವಾಗಿ ಬಾಳೇಗಿಡಗಳು ಸುಟ್ಟು ಹೋಗಿವೆ.

‘ಬೆಳೆ ನಾಟಿ ಮಾಡಿದ ನಂತರ 2‌ನೇ ಫಸಲು ಬಂದಿದ್ದು, ಇನ್ನೂ ಮೂರು ಫಸಲಿಗೆ ಕಾಯುತ್ತಿದ್ದೇವೆ. ಅಷ್ಟರದಲ್ಲಿ ಬಾಳೆಗಿಡಗಳು ಸುಟ್ಟುಹೊಗಿವೆ. ಮತ್ತೆ ಬೆಳೆ ಬೆಳೆಯಲು ₹3 ಲಕ್ಷ ಬೇಕಾಗುತ್ತೆ. ಸರ್ಕಾರ ಪಕೃತಿ ವಿಕೋಪದಡಿ ಪರಿಹಾರ ನೀಡಬೇಕು’ ರೈತ ಮಂಜುನಾಥ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.