ADVERTISEMENT

ಘಾಟಿ ಸುಬ್ರಹ್ಮಣ್ಯ: ಪ್ರವಾಸಿ ಕಲಾ ಉತ್ಸವ

Doddaballapur

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 13:08 IST
Last Updated 3 ಜನವರಿ 2019, 13:08 IST
ಪ್ರವಾಸಿ ಕಲಾ ಉತ್ಸವವನ್ನು ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಗೌರವ ಅಧ್ಯಕ್ಷ ಜಿ.ಎಂ.ಚನ್ನಪ್ಪ ಉದ್ಘಾಟಿಸಿದರು
ಪ್ರವಾಸಿ ಕಲಾ ಉತ್ಸವವನ್ನು ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಗೌರವ ಅಧ್ಯಕ್ಷ ಜಿ.ಎಂ.ಚನ್ನಪ್ಪ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ:‘ಎಲ್ಲರಿಗೂ ಕಲಾ ಬದುಕು ಕಟ್ಟಿಕೊಳ್ಳಲು ಅವಕಾಶವಿದೆ. ಆದರೆ, ಕಲೆ ಹಲವೇ ಮಂದಿಗೆ ಒಲಿಯುವುದು. ಉಳಿದವರು ಕಲಾ ರಸಿಕರಾಗಿ ಉಳಿಯುತ್ತಾರೆ’ ಎಂದು ಘಾಟಿ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಗೌರವ ಅಧ್ಯಕ್ಷ ಜಿ.ಎಂ.ಚನ್ನಪ್ಪ ಹೇಳಿದರು.

ಜಾನಪದ ಸಾಂಸ್ಕೃತಿಕ ಕಲಾ ಸಂಘ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಘಾಟಿ ಸುಬ್ರಹ್ಮಣ್ಯದಲ್ಲಿ ನಡೆದ ಪ್ರವಾಸಿ ಕಲಾ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

’ಇತ್ತೀಚಿನ ಜಾಗತಿಕ ಅಬ್ಬರದಲ್ಲಿ ಜನಪದ ಸೊಗಡು ಮರೆಯಾಗುತ್ತಿದೆ.ಈ ನೆಲದ ಕಲಾ ಸಂಸ್ಕತಿ ಉಳಿಸುವಲ್ಲಿ ಯುವ ಸಮುದಾಯ ಆಸಕ್ತಿ ತೋರಬೇಕು. ಈ ದಿಸೆಯಲ್ಲಿ ಸರ್ಕಾರ ಯುವ ಕಲಾ ಪ್ರತಿಭೆಗಳನ್ನು ಗುರುತಿಸಲು ಸೂಕ್ತ ವೇದಿಕೆ ಕಲ್ಪಿಸಬೇಕು.ಗ್ರಾಮೀಣ ಪ್ರದೇಶದಲ್ಲಿನ ಜನಪದ ಪ್ರತಿಭೆಗಳನ್ನು ಗುರುತಿಸಬೇಕು’ ಎಂದರು.

ADVERTISEMENT

ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿ, ’ಜನಪದ ಸಾಹಿತ್ಯ, ವಚನ ಸಾಹಿತ್ಯ ಸದೃಢ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಯುವ ಸಮುದಾಯ ಈ ಕಡೆಗೆ ಹೆಚ್ಚಿನ ಆಸಕ್ತಿ ವಹಿಸುವಂತೆ ಕಾರ್ಯಗಾರ ಮಾಡುವುದು ಎಲ್ಲರ ಹೊಣೆ’ ಎಂದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ: ರಾಜ್ಯದ ಹಲವು ಕಡೆಗಳಿಂದ ಬಂದಿದ್ದ ವಿವಿಧ ಕಲಾ ತಂಡಗಳು ಆಕರ್ಷಕ ಪ್ರದರ್ಶನ ನೀಡಿದವು.

ಉದ್ಘಾಟನಾ ಕಾರ್ಯಕ್ರಮದಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯೆ ಕೆ.ನಾಗರತ್ನಮ್ಮ, ಕಲಾವಿದರಾದ ರಾಮಚಂದ್ರ ಶ್ಯಾಕಲದೇವನಪುರ, ಶ್ರೀರಾಮಯ್ಯ, ದ್ಯಾವರಪ್ಪ, ಜಾನಪದ ಸಾಂಸ್ಕೃತಿಕ ಸಂಘದ ಮುನಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.