
ಅನುಗೊಂಡನಹಳ್ಳಿ (ಹೊಸಕೋಟೆ): ಹೋಬಳಿಯ ದೇವಲಾಪುರ ಗ್ರಾಮದ ಅಭಯ ಆಂಜನೇಯ ದೇವಾಲಯದಲ್ಲಿ ಮಂಗಳವಾರ ಹನುಮ ಜಯಂತಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಸುಮಾರು 18 ವರ್ಷಗಳ ಹಿಂದೆ ದೇವಲಾಪುರ ಗ್ರಾಮದಲ್ಲಿ ಮಗವೊಂದು ಗ್ರಾಮಸ್ಥರೊಂದಿಗೆ ಸಲುಗೆಯಿಂದ ಇತ್ತು. ಆದರೆ ಅದು ಕೆಲ ದಿನಗಳ ನಂತರ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿತ್ತು. ದೈವ ಸ್ವರೂಪ ಎಂದು ನಂಬಿದ್ದ ಜನ ಮಂಗನ ನೆನಪಿಗಾಗಿ ಗುಡಿ ಕಟ್ಟಿದ್ದರು. ಇದೇ ದೇವಾಲಯದಲ್ಲಿ ಇಂದು ಹನುಮ ಜಯಂತಿ ಆಚರಣೆ ನಡೆದಿದೆ.
ಹನುಮ ದೇವರಿಗೆ ಮುತ್ತಿನ ಮಣಿ ಹಾಗೂ ನವರತ್ನಗಳು ಹಾಗೂ ಹೂವುಗಳಿಂದ ವಿಭಿನ್ನ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು.
ಈ ವೇಳೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಗೀತಾ ಪ್ರಕಾಶ್ ಮಾತನಾಡಿ, ಹನುಮ ದೇವರ ಸ್ಮರಣೆ ಎಲ್ಲಿರಲ್ಲೂ ಒಂದು ವಿಶೇಷ ಶಕ್ತಿ ತುಂಬುತ್ತದೆ. ರಾಮದೂತನ ನೆನೆಯುವ ದಿನವೇ ಹನುಮ ಜಯಂತಿ ಎಂದು ತಿಳಿಸಿದರು.
ಈ ವೇಳೆ ಪ್ರಕಾಶ್, ರಘು ಪ್ರಕಾಶ್, ರಾಹುಲ್ ಕುಮಾರ್, ಮುಖೇಶ್, ಡಿ.ಎಸ್.ಚಂದ್ರಶೇಖರಯ್ಯ ಹಾಗೂ ನೂರಾರು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.