ವಿಜಯಪುರ: ಇಲ್ಲಿನ ರೇಣುಕಾ ಎಲ್ಲಮ್ಮದೇವಿ 80ನೇ ವರ್ಷದ ಹಸಿ ಕರಗ ಮಹೋತ್ಸವ ಬುಧವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು. ಉತ್ಸವದ ಅಂಗವಾಗಿ ದೇವಾಲಯಕ್ಕೆ ವಿಶೇಷ ವಿದ್ಯುತ್ ದೀಪ ಅಲಂಕಾರ ಮಾಡಲಾಗಿತ್ತು. ದೇವರಿಗೆ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು.
ಪೂಜೆ ಸಲ್ಲಿಸುವ ಮೂಲಕ ಕರಗದ ಪೂಜಾರಿ ಜೆ.ಎನ್.ಶ್ರೀನಿವಾಸ್ ಹಸಿ ಕರಗ ಹೊತ್ತರು. ಕರಗಕ್ಕೆ ಮಲ್ಲಿಗೆ ಹೂವು ಎಸೆಯುತ್ತ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ವೀರಕುಮಾರರು ಕತ್ತಿಗಳನ್ನು ಹಿಡಿದು ಕರಗವನ್ನು ಹಿಂಬಾಲಿಸಿದರು.
ಉತ್ಸವ ಸಂಚರಿಸುವ ಬೀದಿಗಳಲ್ಲಿ ಅಲ್ಲಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿ ನೃತ್ಯ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.