ADVERTISEMENT

ಸಂತ್ರಸ್ತರ ನೆರವಿಗೆ ಟರ್ಮಿನಲ್ 2ರಲ್ಲಿ ಸಹಾಯವಾಣಿ ಆರಂಭ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 4:38 IST
Last Updated 4 ಮಾರ್ಚ್ 2026, 4:38 IST

ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರ ಹೊರಭಾಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ.

ವಿಮಾನ ರದ್ದುಗೊಂಡ ಕಾರಣ ಗೊಂದಲಕ್ಕೆ ಒಳಗಾದ ಪ್ರಯಾಣಿಕರಿಗೆ ಮಾಹಿತಿ ನೀಡುವ ಹಾಗೂ ಅಗತ್ಯ ರಸ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಕೆಲಸ ನಡೆಯುತ್ತಿದೆ.

ತುರ್ತು ವೈದ್ಯಕೀಯ ನೆರವು, ಕುಡಿಯುವ ನೀರು, ತಿಂಡಿ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ಮಹಿಳೆಯರಿಗಾಗಿ ಅಗತ್ಯ ವಸ್ತುಗಳು ಹಾಗೂ ವ್ಹೀಲ್‌ ಚೇರ್‌ ವ್ಯವಸ್ಥೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ಹೇಳಿದ್ದಾರೆ.

ADVERTISEMENT

ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಈ ಪ್ರದೇಶಗಳಲ್ಲಿ ಕರ್ನಾಟಕದ ಹಲವರು ಸಿಲುಕಿಕೊಂಡಿರುವ ಮಾಹಿತಿ ಲಭ್ಯವಾಗಿದ್ದು, ಸಂತ್ರಸ್ತರ ನೆರವಿಗಾಗಿ ವಿವಿಧ ದೇಶಗಳಲ್ಲಿ ಭಾರತೀಯ ರಾಯಭಾರಿ ಕಚೇರಿಗಳ ಮೂಲಕ ಸಹಾಯವಾಣಿ ಸಂಖ್ಯೆಗಳು ಪ್ರಕಟಿಸಲಾಗಿದೆ. 

ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ 080-28388005ಕ್ಕೆ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ತಿಳಿಸಿದ್ದಾರೆ.

ಇಸ್ರೇಲ್: +972-54-7520711
ಇರಾನ್: +98 912 810 9115, +98 912 810 9109, +98 912 810 9102, +98 993 217 9359

ಸೌದಿ ಅರೇಬಿಯಾ (ರಿಯಾದ್): 00-966-11-4884697, 00-966-542126748 (ವಾಟ್ಸ್‌ ಆ್ಯಪ್), 800 247 1234 (ಟೋಲ್ ಫ್ರೀ)

ಸೌದಿ ಅರೇಬಿಯಾ (ಜೆದ್ದಾ): +966536209704 (ವಾಟ್ಸ್‌ ಆ್ಯಪ್), 00 966 125643660 / 00966 12 2614093, +966 556122301, 800 2440003 (ಟೋಲ್ ಫ್ರೀ)

ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ): 800-46342 (ಟೋಲ್ ಫ್ರೀ), +971 5430 90571 (ವಾಟ್ಸ್‌ ಆ್ಯಪ್) 

ಕತಾರ್: 00974-55647502

ಬಹರೇನ್‌: 00973-39418071

ಜೋರ್ಡನ್: 00962-770 422 276

ಓಮನ್: 8007 1234 (ಟೋಲ್ ಫ್ರೀ), +968 9828 2270 (ವಾಟ್ಸ್‌ ಆ್ಯಪ್)

ಇರಾಕ್: +964 771 651 1185 (ಇಂಗ್ಲಿಷ್, ಹಿಂದಿ), +964 770 444 4899 (ಅರೇಬಿಕ್)

ಕುವೈತ್: +965 65501946

ಪ್ಯಾಲೆಸ್ಟೈನ್‌: +970 592916418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.