ಅರ್ಜಿ ಆಹ್ವಾನ
ಹೊಸಕೋಟೆ: 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್(ಎನ್‌ಎಚ್‌ಎಂ) ಯೋಜನೆಯಡಿ ವಿವಿಧ ಸವಲತ್ತುಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮೇ31ರೊಳಗೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜೇನು ಕೃಷಿ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಸಿರು ಮನೆ, ಕೃಷಿಹೊಂಡ, ಪ್ಯಾಕ್ ಹೌಸ್, ಹೊಸ ಪ್ರದೇಶ ವಿಸ್ತರಣೆ (ಮಾವು, ಅಂಗಾಂಶ ಬಾಳೆ, ಸೀಬೆ,ಸಪೋಟ,ಹಲಸು,ಡ್ರಾಗನ್ ಪ್ರೋಟ್, ದಾಳಿಂಬೆ, ದ್ರಾಕ್ಷಿ, ಹೈಬ್ರಿಡ್ ತರಕಾರಿ ಹಾಗೂ ಹೂವಿನ ಬೆಳೆ) ಯಂತ್ರೋಪಕರಣ ಕಾರ್ಯಕ್ರಮದಡಿ ಮಿನಿ ಟ್ರ್ಯಾಕ್ಟರ್, ಜೇನು ಪೆಟ್ಟಿಗೆ, ಹಣ್ಣು ಮಾಗಿಸುವ ಘಟಕ, ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆ, ಸೋಲಾರ್ ಪಂಪ್ ಸೆಟ್, ಅಣಬೆ ಬೇಸಾಯ ಘಟಕ ಹಾಗೂ ವಿವಿಧ ಘಟಕಗಳಿಗೆ ಅರ್ಹ ರೈತ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ತಾಲ್ಲೂಕು ತೋಟಗಾರಿಕಾ ಕಚೇರಿ ಅಥವಾ ಹೋಬಳಿ ರೈತ ಸಂಪರ್ಕ ಕೇಂದ್ರ, ಸಹಾಯಕ ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಲು ಇಲಾಖೆ ಪ್ರಕಟಣೆ ತಿಳಿಸಿದೆ. ಎಂ.ಎಸ್.ದೀಪಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಹೊಸಕೋಟೆ-9880210892, ಎನ್.ಸೋಮಶೇಖರ್ ಗೌಡ, ಸಹಾಯಕ ತೋಟಗಾರಿಕೆ ನಿರ್ದೇಶಕರು, ಹೊಸಕೋಟೆ-8453966868
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.