ADVERTISEMENT

ಹೊಸಕೋಟೆ: ಅಣ್ಣಮ್ಮ ದೇವಿ ಉತ್ಸವ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 7:03 IST
Last Updated 8 ನವೆಂಬರ್ 2022, 7:03 IST
ಹೊಸಕೋಟೆಯ ವಹ್ನಿಕುಲ ಕ್ಷತ್ರಿಯ ಯುವ ವೇದಿಕೆ ಹಾಗೂ ಶ್ರೀಆದಿಶಕ್ತಿ ಅಣ್ಣಮ್ಮ ದೇವಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯಿಂದ ಅಣ್ಣಮ್ಮ ದೇವಿ ಉತ್ಸವ ನಡೆಯಿತು
ಹೊಸಕೋಟೆಯ ವಹ್ನಿಕುಲ ಕ್ಷತ್ರಿಯ ಯುವ ವೇದಿಕೆ ಹಾಗೂ ಶ್ರೀಆದಿಶಕ್ತಿ ಅಣ್ಣಮ್ಮ ದೇವಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯಿಂದ ಅಣ್ಣಮ್ಮ ದೇವಿ ಉತ್ಸವ ನಡೆಯಿತು   

ಹೊಸಕೋಟೆ: ನಗರದ ಮೇಲಿನ ಪೇಟೆಯ ಬೇವಿನಮರದ ಬೀದಿಯಲ್ಲಿರುವ ಆದಿಶಕ್ತಿ ಅಣ್ಣಮ್ಮ ದೇವಿ ದೇವಾಲಯದಲ್ಲಿ ಅಣ್ಣಮ್ಮ ದೇವಿ ಮಹೋತ್ಸವ ನಡೆಯಿತು.

ಊರಿನ ಪ್ರಮುಖ ಬೀದಿಗಳಲ್ಲಿ ಅಣ್ಣಮ್ಮ ದೇವಿ ಮೆರವಣಿಗೆ, ದೀಪೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸೋಮವಾರ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ವಹ್ನಿಕುಲ ಕ್ಷತ್ರಿಯ ಯುವ ವೇದಿಕೆ ಅಧ್ಯಕ್ಷ ಅಖಿಲ್ ಕುಮಾರ್‌, ಆದಿಶಕ್ತಿ ಅಣ್ಣಮ್ಮ ದೇವಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ರವಿ, ಉಮೇಶ್ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ADVERTISEMENT

ಕಾರ್ಯಕ್ರಮದಲ್ಲಿ ಮುಖಂಡರಾದ ಕೃಷ್ಣಪ್ಪ, ಮೋಹನ್ ಹಾಗೂ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.