ADVERTISEMENT

ದೊಂಗ್ರ ಬಿದ್ದ ಹೊಸಕೋಟೆ ರಸ್ತೆಗಳು: ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 2:06 IST
Last Updated 18 ಅಕ್ಟೋಬರ್ 2025, 2:06 IST
<div class="paragraphs"><p>ಹೊಸಕೋಟೆ ಸರ್ಕಾರಿ ಆಸ್ಪತ್ರೆ ಮತ್ತು ಎಂವಿಜೆ ಆಸ್ಪತ್ರೆಗೆ ತೆರೇಳುವ ಸಂತೆಗೇಟ್ ಬಳಿಯ ರಸ್ತೆ ಸ್ಥಿತಿ</p></div>

ಹೊಸಕೋಟೆ ಸರ್ಕಾರಿ ಆಸ್ಪತ್ರೆ ಮತ್ತು ಎಂವಿಜೆ ಆಸ್ಪತ್ರೆಗೆ ತೆರೇಳುವ ಸಂತೆಗೇಟ್ ಬಳಿಯ ರಸ್ತೆ ಸ್ಥಿತಿ

   

ಹೊಸಕೋಟೆ: ರಸ್ತೆಯಲ್ಲಿ ಗುಂಡಿ ಇದಿಯೋ, ಗುಂಡಿಯೊಳಗೆ ರಸ್ತೆ ಇದಿಯೋ...!

ಇಂತಹದೊಂದು ಅಸಮಾಧಾನಿತ ಪ್ರಶ್ನೆ ಹೊಸಕೋಟೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರೆ ಮೂಡುತ್ತದೆ. ನಗರದ ಸಂತೆಗೇಟ್ ಬಳಿಯ ರಾಷ್ಟೀಯ ಹೆದ್ದಾರಿ ಹಾದು ಹೋಗುವ ಸೇತುವೆ ಕೆಳಗೆ ಕೋಲಾರ ಸರ್ವಿಸ್ ರಸ್ತೆ, ಚಿಂತಾಮಣಿ ಕೆಡೆಗೆ ತೆರಳುವ ರಸ್ತೆ, ಮಾಲೂರು ರಸ್ತೆ ಸಂಪರ್ಕಿಸುವ ಮತ್ತು ಹೊಸಕೋಟೆ ಕಡೆಗೆ ಹೋಗುವ ಎರಡು ಬದಿಯಲ್ಲಿ ರಾಷ್ಟೀಯ ಹೆದ್ದಾರಿ ಸಂಪರ್ಕಿಸುವ ಸರ್ವಿಸ್ ರಸ್ತೆಗಳಲ್ಲಿ ಸಂಚಾರ ಸರ್ಕಸ್‌ ಮಾಡಿದಂತೆ.

ADVERTISEMENT

ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಸೇತುವೆ ಕಳೆಗಿನ ವೃತ್ತದಲ್ಲಿ ಬೃಹತ್ ಪ್ರಮಾಣದಲ್ಲಿ ಗುಂಡಿಗಳು ಬಿದಿದ್ದು, ಮಳೆ ಸುರಿದಾಗ ಮಳೆ ಮತ್ತು ಚರಂಡಿ ಕೊಳಚೆ ಸಂಗ್ರಹವಾಗಿ ಹಳ್ಳವಾಗಿದ್ದು, ವಾಹನ ಸವಾರರನ್ನು ಅಪಾತಕ್ಕೆ ಆಹ್ವಾನಿಸುತ್ತದೆ.

ಹಲವು ವರ್ಷಗಳಿಂದ ಹದಗೆಟ್ಟ ರಸ್ತೆಯಲ್ಲೇ ಸಂಚರಿಸುತ್ತಿದ್ದು, ಆಡಳಿತ ವರ್ಗಕ್ಕೆ ಗುಂಡಿಮಯ ರಸ್ತೆ ಕಾಣದಾಗಿದೆ. ವಾಹನ ಸವಾರರು ಮಾತ್ರವಲ್ಲದೆ ಪಾದಚಾರಿಗಳು ಸಹ ವ್ಯಥೆ ಪಡುವಂತಾಗಿದೆ.

ನಿತ್ಯವೂ ಇಲ್ಲಿ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ಸಂಚಾರ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಂತೂ ವಾಹನ ಸವಾರರ ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ.

ಸಂತೆಗೇಟ್ ಬಳಿಯೇ ಸರ್ಕಾರಿ ಆಸ್ಪತ್ರೆ ಇರುವ ಕಾರಣ ಪ್ರತಿನಿತ್ಯ ನೂರಾರು ಸಂಖೆಯಲ್ಲಿ ತಪಾಸಣೆ ಮತ್ತಿತರ ಕಾರಣಗಳಿಗೆ ಬರುತ್ತಾರೆ. 50 ಮೀ ಅಥವಾ 60 ಮೀ ವಿಸ್ತೀರ್ಣದ ಸರ್ಕಲ್ ಬಳಿ ಒಂದು ಬದಿಯಿಂದ ಇನ್ನೊಂದು ಬದಿಗೆ ವಾಹನಗಳು ತಲುಪಲು ಹರ ಸಾಹಸ ಪಡುತ್ತಿವೆ. ವಾಹನ ದಟ್ಟಣೆ ಉಂಟಾದರೆ ಕನಿಷ್ಠ 20 ನಿಮಿಷ ಹಿಡಿಯುತ್ತದೆ. ವಾಹನ ದಟ್ಟಣೆ ನಿಯಂತ್ರಣಕ್ಕೆ ಯಾವುದೇ ವ್ಯವಸ್ಥೆ ಇಲ್ಲದೆ ವಾಹನ ಸವಾರರು ಹಾಗೂ ಪದಾಚಾರಿಗಳು ಹೈರಾಣಾಗಿದ್ದಾರೆ.

ರೋಗಿಗಳನ್ನು ಚಿಂತಾಮಣಿ ಮತ್ತು ಮಾಲೂರು ಭಾಗಗಳಿಂದ ಹೊಸಕೋಟೆ ನಗರಕ್ಕೆ ಅಥವಾ ಬೆಂಗಳೂರಿಗೆ ಕರೆದ್ಯೊಯಲು ಸಂತೆಗೇಟ್ ಮೂಲಕವೇ ಹೋಗಬೇಕಿರುವ ಕಾರಣ ಈ ವೃತ್ತ ದಾಟುವುದೇ ದೊಡ್ಡ ಸವಾಲಾಗಿದೆ.

ತೇಪೆ ಕೂಡ ಹಾಕಿಲ್ಲ  ಸಂತೆಗೇಟ್ ಬಳಿಯ ವೃತ್ತದ ಬಳಿ ಎರಡು ರಾಷ್ಟೀಯ ಹೆದ್ದಾರಿ ಸಂಧಿಸುವ ಕಾರಣ ಇದನ್ನು ಯಾರು ದುರಸ್ತಿ ಮಾಡಬೇಕು ಎಂಬುದು ತಾಲ್ಲೂಕು ಆಡಳಿತ ವರ್ಗಕ್ಕೆ ಆಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕಾಗಲಿ ಇಲ್ಲ. ಹಾಗಾಗಿಯೇ ವರ್ಷಗಳಿಂದ ಇಲ್ಲಿ ಕನಿಷ್ಠ ತೇಪೆ ಹಚ್ಚುವ ಕೆಲಸವು ಆಗುತ್ತಿಲ್ಲ
ವರದಾಪುರ ನಾಗರಾಜ್, ಹೊಸಕೋಟೆ
ಸಂತೆಗೇಟ್ ಬಳಿಯ ಗುಂಡಿಮಯ ರಸ್ತೆಯಲ್ಲಿ ಬೃಹತ್‌ ವಾಹನಗಳು ಸಂಚರಿಸುತ್ತದೆ. ಬೈಕ್‌ ಸವಾರರು ಸ್ವಲ್ಪ ಎಚ್ಚರ ತಪ್ಪಿದರೆ ಮನೆ ತಲುಪುವುದು ಗ್ಯಾರೆಂಟಿ ಇರುವುದಿಲ್ಲ. ಇದು ಸರ್ಕಾರಗಳು ನಮಗೆ ನೀಡುತ್ತಿರುವ ಹೊಸ ಗ್ಯಾರಂಟಿ
ಮುನಿರಾಜು, ಬೈಕ್‌ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.