ADVERTISEMENT

ನಾವು ಡಿನ್ನರ್ ರಾಜಕಾರಣ ಮಾಡಿಲ್ಲ, ಅದರ ಅವಶ್ಯಕತೆ ಇಲ್ಲ: ಶಾಸಕ ಶರತ್ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 2:24 IST
Last Updated 28 ಫೆಬ್ರುವರಿ 2026, 2:24 IST
<div class="paragraphs"><p>ಶಾಸಕ ಶರತ್ ಬಚ್ಚೇಗೌಡ</p></div>

ಶಾಸಕ ಶರತ್ ಬಚ್ಚೇಗೌಡ

   

ನಂದಗುಡಿ(ಹೊಸಕೋಟೆ): ‘ನಿನ್ನೆ ಮಾಗಡಿ ಶಾಸಕ ಬಾಲಕೃಷ್ಣ ಅವರ ಹುಟ್ಟುಹಬ್ಬಕ್ಕೆ ನಮ್ಮನ್ನು ಆಹ್ವಾನ ಮಾಡಿದ್ದರು. ಆತ್ಮೀಯರೆಲ್ಲರೂ ಶುಭಕೋರಲು ಒಂದೆಡೆ ಸೇರಿದ್ದು, ನಿಜ ಆದರೆ ಯಾವುದೇ ರಾಜಕಾರಣ ಮಾಡಿಲ್ಲ’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ನಂದಗುಡಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ಸಾಮಾನ್ಯವಾಗಿ ರಾಜಕಾರಣಿಗಳು ಒಂದೆಡೆ ಸೇರಿದಾಗ ರಾಜಕಾರಣದ ತತ್ವ, ಸಿದ್ಧಾಂತಗಳನ್ನು ಮಾತನಾಡುವುದು ಸಹಜ. ಅದನ್ನೇ ಏನೋ ಬದಲಾವಣೆ ತರಲು ಸಭೆ ಸೇರಿದ್ದಾರೆ ಎಂದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಕರ್ನಾಟಕ ಸರ್ಕಾರದ ಅಭಿವೃದ್ಧಿ ಪರ್ವಗಳೇ ನಿಜವಾದ ಬದಲಾವಣೆಗಳು’ ಎಂದು ಹೇಳಿದರು.

ADVERTISEMENT

ಇದಕ್ಕೂ ಮೊದಲು ಹೋಬಳಿಯ ಇಟ್ಟಸಂದ್ರ, ನಂದಗುಡಿ, ಬೈಲನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಸ್ತೂರು ಹೊಸಹಳ್ಳಿ, ಇಟ್ಟಸಂದ್ರ, ಹಳೆಯೂರು, ನಂದಗುಡಿ, ವಡ್ಡಹಳ್ಳಿ, ಎನ್.ಹೊಸಹಳ್ಳಿ, ಹನುಮಂತರಾಯಪುರ ಗ್ರಾಮಗಳಲ್ಲಿನ ಸಿ.ಸಿ ರಸ್ತೆ‌ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಸಲ್ಲಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.