ADVERTISEMENT

ಆನೇಕಲ್| ಆನೆ ದಂತದ ವಿಗ್ರಹ ಮಾರಾಟ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 7:21 IST
Last Updated 15 ಜನವರಿ 2026, 7:21 IST
ಆನೇಕಲ್ ತಾಲ್ಲೂಕಿನ ಕೊಪ್ಪಗೇಟ್‌ನಲ್ಲಿ ಆನೆ ದಂತದಿಂದ ಮಾಡಿದ ವಿಗ್ರಹ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಜಿಗಣಿ ಪೊಲೀಸರು ಬಂಧಿಸಿ ರಾಧ ಕೃಷ್ಣ ವಿಗ್ರಹ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ
ಆನೇಕಲ್ ತಾಲ್ಲೂಕಿನ ಕೊಪ್ಪಗೇಟ್‌ನಲ್ಲಿ ಆನೆ ದಂತದಿಂದ ಮಾಡಿದ ವಿಗ್ರಹ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಜಿಗಣಿ ಪೊಲೀಸರು ಬಂಧಿಸಿ ರಾಧ ಕೃಷ್ಣ ವಿಗ್ರಹ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ   

ಆನೇಕಲ್: ಆನೆ ದಂತದಿಂದ ತಯಾರಿಸಿದ ವಿಗ್ರಹ ಮಾರಾಟ ಜಾಲ ಪತ್ತೆಹಚ್ಚಿರುವ ಜಿಗಣಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇವರಿಂದ  ದಂತದಿಂದ ತಯಾರಿಸಿದ ರಾಧಾಕೃಷ್ಣ ವಿಗ್ರಹ ಮತ್ತು ಬೈಕ್‌ ಅನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಬನಶಂಕರಿ ನಿವಾಸಿ ಮೊಹಮ್ಮದ್ ಶಬೀರ್ (50), ಸುಧಾಮನಗರದ ನರೇಂದ್ರ ಶರ್ಮ(45) ಬಂಧಿತರು.

ಇವರು ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಪ್ಪ ಗೇಟ್ ಬಳಿ ಆನೆ ದಂತದಿಂದ ತಯಾರಿಸಿದ ವಿಗ್ರಹ ಮಾರಾಟ ಮಾಡಲು ಬಂದಿದ್ದರು. ಖಚಿತ ಮಾಹಿತಿಯ ಮೇರೆಗೆ ಜಿಗಣಿ ಪೊಲೀಸ್ ಇನ್‌ಸ್ಪೆಕ್ಟರ್‌ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿ ವಿಗ್ರಹದ ಸಮೇತವಾಗಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ವಿಗ್ರಹದ ಅಂದಾಜು ಮೌಲ್ಯ ₹20 ಲಕ್ಷ ಎಂದು ಅಂದಾಜಿಸಲಾಗಿದೆ. ವಿಗ್ರಹಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ರವಾನಿಸಲಾಗಿದೆ.

ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.