ADVERTISEMENT

ದೊಡ್ಡಬಳ್ಳಾಪುರ: ಜಕ್ಕಲಮೊಡಗು ಜಲಾಶಯಕ್ಕೆ ಬಾಗಿನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 2:15 IST
Last Updated 31 ಅಕ್ಟೋಬರ್ 2025, 2:15 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಜಕ್ಕಲಮಡುಗು ಜಲಾಶಯಕ್ಕೆ ಶಾಸಕ ಧೀರಜ್ ಮುನಿರಾಜು ಬುಧವಾರ ಬಾಗಿನ ಅರ್ಪಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಜಕ್ಕಲಮಡುಗು ಜಲಾಶಯಕ್ಕೆ ಶಾಸಕ ಧೀರಜ್ ಮುನಿರಾಜು ಬುಧವಾರ ಬಾಗಿನ ಅರ್ಪಿಸಿದರು   

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ಜಕ್ಕಲಮಡಗು ಜಲಾಶಯಕ್ಕೆ ಶಾಸಕ ಧೀರಜ್ ಮುನಿರಾಜು ಬುಧವಾರ ಬಾಗಿನ ಅರ್ಪಿಸಿದರು.

ಈ ವೇಳೆ ಮಾತನಾಡಿ, ಜಕ್ಕಲಮಡಗು ಜಲಾಶಯದಿಂದಾಗಿ ದೊಡ್ಡಬಳ್ಳಾಪುರದ ನೀರಿನ ಬವಣೆ ಬಹಳಷ್ಟು ನೀಗಿದೆ. ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಎರಡು ನಗರಗಳಿಗೆ ನೀರಿನ ಆಸರೆಯಾಗಿರುವ ಜಕ್ಕಲಮಡಗು ಜಲಾಶಯ ತುಂಬಿರುವುದು ಹರ್ಷ ತಂದಿದೆ. ಎರಡನೇ ಬಾರಿ ಬಾಗಿನ ಅರ್ಪಿಸುತ್ತಿರುವುದು ಸಂತಸ ತಂದಿದೆ ಎಂದರು.

ನಗರ ಸಭೆ ಅಧ್ಯಕ್ಷೆ ಸುಮಿತ್ರ ಆನಂದ್, ಉಪಾಧ್ಯಕ್ಷ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್ ಪೌರಾಯುಕ್ತ ಕಾರ್ತಿಕೇಶ್ವರ, ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್, ಶಿವು, ವತ್ಸವ ಇಂದ್ರಾಣಿ, ರೂಪಿಣಿ, ಮಂಜುಳ, ನಾಗವೇಣಿ, ಹಂಸಪ್ರಿಯಾ, ಪ್ರಭಾ, ಸುಧಾರಾಣಿ, ತಾಂತ್ರಿಕ ವಿಭಾಗದ ಎಇಇ ರಾಮೇಗೌಡ, ಪರಿಸರ ವಿಭಾಗದ ಎಇಇ ಈರಣ್ಣ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.