ADVERTISEMENT

ಕೋಡಿಬಿದ್ದ ಜಕ್ಕಲಮೊಡುಗು ಡ್ಯಾಂ

ಜಲಾಶಯದಿಂದ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರಕ್ಕೆ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 9:15 IST
Last Updated 26 ಆಗಸ್ಟ್ 2021, 9:15 IST
ಜಕ್ಕಲಮೊಡಗು ಜಲಾಶಯದಲ್ಲಿ ದಾಖಲೆ ಪ್ರಮಾಣದ ನೀರು ಸಂಗ್ರಹ
ಜಕ್ಕಲಮೊಡಗು ಜಲಾಶಯದಲ್ಲಿ ದಾಖಲೆ ಪ್ರಮಾಣದ ನೀರು ಸಂಗ್ರಹ   

ದೊಡ್ಡಬಳ್ಳಾಪುರ: ಮಂಗಳವಾರ ಇಡೀ ರಾತ್ರಿ ಸುರಿದ ಭರ್ಜರಿ ಮಳೆಯಿಂದಾಗಿ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಎರಡೂ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಕ್ಕಲಮೊಡಗು ಜಲಾಶಯ ಕೋಡಿ ಬಿದ್ದಿದ್ದು ಸಾರ್ವಜನಿಕರಲ್ಲಿ ಹರ್ಷ ಮೂಡಿದೆ.

45 ಅಡಿಯಷ್ಟು ಆಳ ನೀರು ನಿಲ್ಲುವ ಸಮರ್ಥ್ಯ ಹೊಂದಿರುವ ಜಕ್ಕಲಮೊಡಗು ಜಲಾಶಯದಲ್ಲಿ ಒಟ್ಟಾರೆ 4,390 ದಶಲಕ್ಷ ಲೀಟರ್ ನೀರು ಸಂಗ್ರಹಣೆಯಾಗಿದೆ. ಇದರಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ 1,390 ದಶಲಕ್ಷ ಲೀಟರ್, ಚಿಕ್ಕಬಳ್ಳಾಪುರ ನಗರಕ್ಕೆ 3,000 ದಶಲಕ್ಷ ಲೀಟರ್ ನೀರಿನ ಹಂಚಿಕೆಯಾಗಿದೆ.

ದಾಖಲೆ ಮಳೆ: ಮಂಗಳವಾರ ತಾಲ್ಲೂಕಿನಲ್ಲಿ 36.9 ಮಿ.ಮೀ ಮಳೆ ಸುರಿದಿದ್ದು, ಹೆಗ್ಗಡಿಹಳ್ಳಿ ಹಾಗೂ ಮೆಳೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ದಾಖಲೆಯ 129.5 ಮಿಲಿ ಮೀಟರ್ ಮಳೆಯಾಗಿದೆ.

ADVERTISEMENT

ಉಳಿದಂತೆ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 21.4 ಮಿ.ಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 11.3 ಮಿ.ಮೀ, ಮಧುರೆ ಹೋಬಳಿಯಲ್ಲಿ 8.1 ಮಿ.ಮೀ, ಸಾಸಲು ಹೋಬಳಿಯಲ್ಲಿ 49.8 ಮಿ.ಮೀ, ತೂಬಗೆರೆ ಹೋಬಳಿಯಲ್ಲಿ 72.7 ಮಿ.ಮೀ ಮಳೆಯಾಗಿದೆ. ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 63 ಮಿ.ಮೀ, ಆರೂಢಿ ಮತ್ತು ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 62 ಮಿಮೀ ಮಳೆಯಾಗಿದೆ ಎಂದು ಕೃಷಿ ತಾಂತ್ರಿಕ ಅಧಿಕಾರಿ ರೂಪಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.