ADVERTISEMENT

ಗ್ರಾಮ ಪಂಚಾಯಿತಿ ಫಲಿತಾಂಶ: ಮೀಸಲು ಅಭ್ಯರ್ಥಿಗಳು ಸಾಮಾನ್ಯ ಕ್ಷೇತ್ರಕ್ಕೂ ಪರಿಗಣನೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 1:43 IST
Last Updated 30 ಡಿಸೆಂಬರ್ 2020, 1:43 IST
ಗೆಲುವು-ಸೋಲಿನ ಲೆಕ್ಕಾಚಾರದ ಗ್ರಾಫಿಕ್‌
ಗೆಲುವು-ಸೋಲಿನ ಲೆಕ್ಕಾಚಾರದ ಗ್ರಾಫಿಕ್‌   

ದೊಡ್ಡಬಳ್ಳಾಪುರ: ತಾಲ್ಲೂಕಿನ 25 ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಬೆಳಿಗ್ಗೆ 10 ಗಂಟೆ ವೇಳೆಗೆ ಪ್ರಕಟವಾಗಲು ಆರಂಭವಾಗಲಿದೆ. ಚುನಾವಣಾ ಫಲಿತಾಂಶದ ಬಗ್ಗೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಲೆಕ್ಕಚಾರಕ್ಕೆ ಅಂತಿಮ ತೆರೆ ಬೀಳಲಿದೆ.

ಫಲಿತಾಂಶದಲ್ಲಿ ಮೀಸಲು ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಸಾಮಾನ್ಯ ಕ್ಷೇತ್ರಗಳ ಸ್ಪರ್ಧಿಗಳ ಗೆಲುವು ಸೋಲಿನ ಮೇಲೆಪ್ರಭಾವ ಬೀರಲಿದ್ದಾರೆ. ಚುನಾವಣೆ ಪ್ರತಿ ಮತಗಟ್ಟೆ ಮತ ಎಣಿಕೆ ಮುಗಿದಾಗ ಮೊದಲು ಮೀಸಲು ಅಭ್ಯರ್ಥಿಯ ಗೆಲುವು ನಿರ್ಧಾರವಾಗುತ್ತದೆ. ಮೀಸಲು ಕ್ಷೇತ್ರದ ಗೆಲುವಿನ ನಂತರ ಉಳಿಯುವ ಎರಡನೇ ಅಭ್ಯರ್ಥಿ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗೆ ಸ್ಪರ್ಧಿಯಾಗಲಿದ್ದಾರೆ. ಮೀಸಲು ಕ್ಷೇತ್ರದ ಅಭ್ಯರ್ಥಿಗಳಿಗಿಂತ ಸಾಮಾನ್ಯ ಅಭ್ಯರ್ಥಿ ಕಡಿಮೆ ಮತಗಳನ್ನು ಪಡೆದುಕೊಂಡರೆ ಮೀಸಲು ಕ್ಷೇತ್ರದ ಎರಡನೇ ಅಭ್ಯರ್ಥಿ ಸಾಮಾನ್ಯ ಕ್ಷೇತ್ರದಲ್ಲಿ ಜಯಗಳಿಸಿದಂತೆ ಆಗುತ್ತದೆ. ಇದ್ದರಿಂದ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗಿಂತ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ಗೆಲುವು ಸಾಧಿಸಲು ಹೆಚ್ಚಿನ ಮತಗಳು ಪಡೆಯಬೇಕಾಗಿದೆ ಎಂದು ಚುನಾವಣಾ ಆಯೋಗದ ನಿಯಮ.

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ‘ಎ’ ಮತ್ತು ‘ಬಿ’ ಹಾಗೂ ಮಹಿಳಾ ಮೀಸಲು ಸ್ಥಾನಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಪಡೆದುಕೊಳ್ಳುವ ಮತಗಳು ಸಾಮಾನ್ಯ ಅಭ್ಯರ್ಥಿಗಳ ಗೆಲುವು ನಿರ್ಧರಿಸಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.