ADVERTISEMENT

ದೊಡ್ಡಬಳ್ಳಾಪುರ ವಿವಿಧಡೆ ಕಾರ್ತಿಕ ಸೋಮವಾರ

ಕಾರ್ತಿಕ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 16:12 IST
Last Updated 11 ಡಿಸೆಂಬರ್ 2023, 16:12 IST
ದೊಡ್ಡಬಳ್ಳಾಪುರ ಬಯಲು ಬಸವಣ್ಣ ದೇವಾಲಯದಲ್ಲಿ ಸೋಮವಾರ ನಡೆದ ಕಡಲೇಕಾಯಿ ಪರಿಷೆ ನಡೆಯಿತು
ದೊಡ್ಡಬಳ್ಳಾಪುರ ಬಯಲು ಬಸವಣ್ಣ ದೇವಾಲಯದಲ್ಲಿ ಸೋಮವಾರ ನಡೆದ ಕಡಲೇಕಾಯಿ ಪರಿಷೆ ನಡೆಯಿತು   

ದೊಡ್ಡಬಳ್ಳಾಪುರ: ಕಾರ್ತಿಕ ಮಾಸದ ಕೊನೆ ಸೋಮವಾರ ನಗರದ ಕೊಂಗಾಡಿಯಪ್ಪ ಕಾಲೇಜು ರಸ್ತೆ ಬಯಲು ಬಸವಣ್ಣ ದೇವಾಲಯದ ಬಳಿ ಕಡಲೇಕಾಯಿ ಪರಿಷೆ ನಡೆಯಿತು. ಮಂಜುನಾಥಸ್ವಾಮಿ, ಬಸವಣ್ಣ ಹಾಗೂ ಗಣಪತಿ ದೇವತಾ ಮೂರ್ತಿಗಳಿಗೆ ವಿಶೇಷ ಕಡಲೇ ಕಾಯಿ ಅಲಂಕಾರ ಮಾಡಲಾಗಿತ್ತು.

ಬಯಲು ಬಸವಣ್ಣ ದೇವಾಲಯದ ಸೇವಾ ಟ್ರಸ್ಟ್ ಮತ್ತು ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದಿಂದ 68ನೇ ಕನ್ನಡ ರಾಜ್ಯೋತ್ಸವ ಮತ್ತು ಸಂಘದ 29ನೇ ವಾರ್ಷಿಕೋತ್ಸವ ಆಚರಿಸಲಾಯಿತು.

ತಾಲ್ಲೂಕಿನ ಶಿರವಾರ, ಅಂತರಹಳ್ಳಿ ಗ್ರಾಮದ ತೋಪಿನ ಬಸವೇಶ್ವರಸ್ವಾಮಿ, ಎಸ್‌.ಎಂ.ಗೊಲ್ಲಹಳ್ಳಿ ಬಯಲು ಬಸವಣ್ಣ ದೇವಾಲಯ, ದರ್ಗಾಜೋಗಹಳ್ಳಿಯಲ್ಲಿ ಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.

ADVERTISEMENT

ತಾಲ್ಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರ ಕಾಶಿ ವಿಶ್ವನಾಥ ದೇಗುಲದಲ್ಲಿ ಲಕ್ಷ ದೀಪೋತ್ಸವ, ಸಹಸ್ರ ಬಿಲ್ವಾರ್ಚನೆ ನಡೆಯಿತು.

ನಗರದ ಸ್ವಯಂಬುಕೇಶ್ವರ (ಸೋಮೇಶ್ವರ) ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಸಂಜೆ ಲಕ್ಷ ದೀಪೋತ್ಸವ ನಡೆಯಿತು. ಬಸವೇಶ್ವರನಗರ, ಕುವೆಂಪುನಗರ ಭಕ್ತರಿಂದ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕಿನ ಮಧುರೆ ಹೋಬಳಿ ಮಾರಸಂದ್ರ ಈರಮಾಸ್ತಮ್ಮ ದೇವಾಲಯದಲ್ಲಿ 13ನೇ ವರ್ಷದ ಲಕ್ಷ ದೀಪೋತ್ಸವ ಹಾಗೂ ವಿಶೇಷ ಅಲಂಕಾರ ಮಾಡಲಾಗಿತ್ತು.

ನಗರೇಶ್ವರಸ್ವಾಮಿ, ಸಪ್ತಮಾತೃಕ ಮಾರಿಯಮ್ಮ, ಕಾಶಿವಿಶ್ವೇಶ್ವರ, ರಾಮಲಿಂಗಚಂದ್ರ ಚೌಡೇಶ್ವರಿ ದೇವಾಲಯ, ನಗರದ ಮಲೈಮಾದೇಶ್ವರಸ್ವಾಮಿ, ಕಂಠೇಶ್ವರಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು.

ತಾಲ್ಲೂಕಿಗೆ ಸಮೀಪದ ಕಣಿವೆಪುರ ಕಣಿವೆ ಬಸವಣ್ಣನಿಗೆ ಕಾರ್ತಿಕ ಕಡೆ ಸೋಮವಾರ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಾಶೆಟ್ಟಿಹಳ್ಳಿ ಬಸವಣ್ಣ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.

ದೊಡ್ಡಬಳ್ಳಾಪುರ ಸ್ವಯಂಬುಕೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಮಂಜುನಾಥಸ್ವಾಮಿ ದೇವಾಲಯದಲ್ಲಿ ಮುತ್ತಿನ ಅಲಂಕಾರ ಮಾಡಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.