ADVERTISEMENT

ಕಾರ್ತಿಕ ಸೋಮವಾರದ ವಿಶೇಷ ಪೂಜಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 6:01 IST
Last Updated 1 ನವೆಂಬರ್ 2022, 6:01 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಮಾರಸಂದ್ರ ಗ್ರಾಮದ ಕೊಂಡದಮ್ಮ ದೇಗುಲದಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮ ನಡೆಯಿತು
ದೊಡ್ಡಬಳ್ಳಾಪುರ ತಾಲ್ಲೂಕಿನ ಮಾರಸಂದ್ರ ಗ್ರಾಮದ ಕೊಂಡದಮ್ಮ ದೇಗುಲದಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮ ನಡೆಯಿತು   

ದೊಡ್ಡಬಳ್ಳಾಪುರ:ಕಾರ್ತಿಕ ಮಾಸದ ಮೊದಲನೇ ಸೋಮವಾರದ ಅಂಗವಾಗಿ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ತಾಲ್ಲೂಕಿನ ಕನಸವಾಡಿ ಸಮೀಪದ ಮಾರಸಂದ್ರ ಗ್ರಾಮದ ಇತಿಹಾಸ ಪ್ರಸಿದ್ಧ ಪುರಾತನ ಶ್ರೀಕೊಂಡದಮ್ಮ ದೇವಾಲಯದಲ್ಲಿ ದೇವಿಗೆ ವಿಶೇಷ ಹೂವಿನ ಅಲಂಕಾರ, ಸಂಜೆ ದೀಪೋತ್ಸವ ಕಾರ್ಯಕ್ರಮ, ಪ್ರಸಾದ ವಿನಿಯೋಗ ನಡೆಯಿತು.

ನಗರದ ಶ್ರೀಸ್ವಯಂಬುಕೇಶ್ವರ, ಬಯಲು ಬಸವಣ್ಣ ಮಂಜುನಾಥಸ್ವಾಮಿ, ಶ್ರೀನಗರೇಶ್ವರ, ಶ್ರೀರಾಮಲಿಂಗ ಚಂದ್ರ ಚೌಡೇಶ್ವರಿ ದೇವಾಲಯ, ನಗರೇಶ್ವರ, ಶ್ರೀಕಂಠೇಶ್ವರ, ಶ್ರೀನಗರದ ಮಲೈಮಾದೇಶ್ವರ ಸ್ವಾಮಿ ದೇವಾಲಯ ಹಾಗೂ ತಾಲ್ಲೂಕಿಗೆ ಸಮೀಪದ ಕಣಿವೆಪುರದ ಕಣಿವೆ ಬಸವಣ್ಣನಿಗೆ ಬೆಳಿಗ್ಗಿನಿಂದಲೇ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.