ADVERTISEMENT

ಕೆಂಪೇಗೌಡರ ಜನಸೇವೆ ಸ್ಮರಣೀಯ: ಮಾಜಿ ಸಚಿವ ಆಂಜನಮೂರ್ತಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 20:16 IST
Last Updated 3 ಜುಲೈ 2022, 20:16 IST
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆಂಜನಮೂರ್ತಿ ಮಾತನಾಡಿದರು. ಮುಖಂಡರಾದ ಚೌಡಯ್ಯ, ಸಪ್ತಗಿರಿ ಶಂಕರ್ ನಾಯಕ್, ಕಾರೆಹಳ್ಳಿ ವೆಂಕಟರಾಮು, ಎಚ್.ಪಿ. ಚೆಲುವರಾಜು, ಶಿವಣ್ಣ ಇದ್ದರು
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆಂಜನಮೂರ್ತಿ ಮಾತನಾಡಿದರು. ಮುಖಂಡರಾದ ಚೌಡಯ್ಯ, ಸಪ್ತಗಿರಿ ಶಂಕರ್ ನಾಯಕ್, ಕಾರೆಹಳ್ಳಿ ವೆಂಕಟರಾಮು, ಎಚ್.ಪಿ. ಚೆಲುವರಾಜು, ಶಿವಣ್ಣ ಇದ್ದರು   

ನೆಲಮಂಗಲ: ‘ಕೆಂಪೇಗೌಡರ ದೂರ ದೃಷ್ಟಿ ಫಲವಾಗಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆಯಲು ಕಾರಣವಾಗಿದೆ’ ಎಂದು ಮಾಜಿ ಸಚಿವ ಆಂಜನಮೂರ್ತಿ ತಿಳಿಸಿದರು.

ಕೆಪಿಸಿಸಿ ತಾಲ್ಲೂಕು ಘಟಕ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾಡ ಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.

‘ಮಹಾಪುರುಷರನ್ನು ಪ್ರಸ್ತುತ ದಿನಮಾನಗಳಲ್ಲಿಯೂ ನೆನೆಯುತ್ತೇವೆ. ನಾಡಪ್ರಭು ಕೆಂಪೇಗೌಡರು, ಬಸವೇಶ್ವರರು, ಅಂಬೇಡ್ಕರ್ ಇನ್ನು ಅನೇಕರು ತಾವು ಮಾಡಿದ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ’ ಎಂದು ಹೇಳಿದರು.

ADVERTISEMENT

ಮುಖಂಡ ಸಪ್ತಗಿರಿ ಶಂಕರ್ ನಾಯಕ್ ಅವರು ಮಾತನಾಡಿ, ‘ಕೆಂಪೇಗೌಡರು ಪ್ರಕೃತಿ ವಿಕೋಪಗಳ ಅಪಾಯ ಕಡಿಮೆ ಇರುವ ಭೌಗೋಳಿಕ ವಾಗಿ ಎತ್ತರ ಪ್ರದೇಶದಲ್ಲಿರುವ ಬೆಂಗ ಳೂರನ್ನು ಆಯ್ಕೆ ಮಾಡಿಕೊಂಡು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಮಾರುಕಟ್ಟೆ ನಿರ್ಮಾಣ ಮಾಡಿ, ಉದ್ಯೋಗಾವಕಾಶ ವನ್ನೂ ಕಲ್ಪಿಸಿಕೊಟ್ಟಿದ್ದಾರೆ’ ಎಂದು ಸ್ಮರಿಸಿದರು.

ಮುಖಂಡ ಚಿಕ್ಕನಾಗಯ್ಯ ಮಾತನಾಡಿ ನೆಲಮಂಗಲದಲ್ಲಿ ಒಂದು ವೃತ್ತವನ್ನು ನಿರ್ಮಿಸಿ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಕಾರೆಹಳ್ಳಿ ವೆಂಕಟರಾಮು, ಎಚ್.ಪಿ.ಚೆಲುವ ರಾಜು, ಶಿವಣ್ಣ, ಉಮಾದೇವಿ, ಉಮೇಶ್, ರಂಗನಾಥ್ ಭಾಬು, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.