ADVERTISEMENT

ಘಾಟಿ: ಕುಮಾರ ಷಷ್ಠಿ ಪೂಜೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 2:32 IST
Last Updated 25 ಜನವರಿ 2026, 2:32 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕುಮಾರ ಷಷ್ಠಿ ಅಂಗವಾಗಿ ಶನಿವಾರ ಭಕ್ತರು ಕುಟುಂಬ ಸಮೇತ ಹುತ್ತಗಳಿಗೆ ಪೂಜೆ ಸಲ್ಲಿಸಿ ಹಾಲೆರೆದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕುಮಾರ ಷಷ್ಠಿ ಅಂಗವಾಗಿ ಶನಿವಾರ ಭಕ್ತರು ಕುಟುಂಬ ಸಮೇತ ಹುತ್ತಗಳಿಗೆ ಪೂಜೆ ಸಲ್ಲಿಸಿ ಹಾಲೆರೆದರು   

ಪ್ರಜಾವಾಣಿ ವಾರ್ತೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಷಷ್ಠಿ ಅಂಗವಾಗಿ ವಿವಿಧ ಗ್ರಾಮಗಳ ರೈತರು ಕ್ಷೇತ್ರದಲ್ಲಿಯೇ ಅಡುಗೆ ಮಾಡಿ ಹುತ್ತಗಳಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಶನಿವಾರ ಎಲ್ಲೆಡೆ ಕಂಡು ಬಂತು.

ಕ್ಷೇತ್ರಕ್ಕೆ ಬೆಳಗಿನಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಅಭಿಷೇಕ ಅಲಂಕಾರ, ಪೂಜೆ ನಡೆಯಿತು. ಶುಕ್ರವಾರ ರಾತ್ರಿ ದೇವಾಲಯದ ಸಮೀಪದ ಕುಮಾರಧಾರ ಪುಷ್ಕರಣಿಯಲ್ಲಿ ತೆಪ್ಪೋತ್ಸವ ಅದ್ದೂರಿಯಾಗಿ ನಡೆಯಿತು.

ADVERTISEMENT

ಹುತ್ತ, ನಾಗಕಲ್ಲುಗಳಿಗೆ ವಿವಿಧ ಗ್ರಾಮಗಳಿಂದ ಕುಟುಂಬ ಸಮೇತರಾಗಿದ್ದ ಬಂದಿದ್ದ ರೈತರು ಅಲ್ಲಿಯೇ ಅಡುಗೆ ಮಾಡಿ ಹುತ್ತಗಳಿಗೆ ಪೂಜೆ ಸಲ್ಲಿಸಿ ಹಾಲೆರೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕುಮಾರ ಷಷ್ಠಿ ಹಿಂದಿನ ದಿನವಾದ ಶುಕ್ರವಾರ ರಾತ್ರಿ ಕುಮಾರಧಾರ ಪುಷ್ಕರಣಿಯಲ್ಲಿ ತೆಪ್ಪೋತ್ಸವ ಅದ್ದೂರಿಯಾಗಿ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.