
ದೊಡ್ಡಬಳ್ಳಾಪುರ: ನಗರದ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ವಿಶ್ವಮಟ್ಟದ ಕೂರ್ಮಾಸನ ಭಾರ ಹೊರುವ ಪ್ರದರ್ಶನದಲ್ಲಿ ಎ.ಜಿ.ಯಶಸ್ವಿನಿ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಕೂರ್ಮಾಸನದಲ್ಲಿ 186 ಕೆ.ಜಿ ಭಾರ ಹೊತ್ತು ವಿಶ್ವ ದಾಖಲೆ ಮಾಡಿದ್ದಾರೆ.
ಗ್ಲೋಬಲ್ ಯೋಗ ರೆಕಾರ್ಡ್ ಕೌನ್ಸಿಲಿಂಗ್‌ನ ದಾಖಲೆಗಾಗಿ ಇಲ್ಲಿನ ಯೋಗ ದೀಪಿಕಾ ಯೋಗ ಕೇಂದ್ರ ಟ್ರಸ್ಟ್, ಹರ್ಷಿಣಿ ಗ್ರೂಪ್ ಆಫ್ ಯೋಗ ಇನ್ ಕೂರ್ಮಾಸನ ಹಾಗೂ ರಾಮಕೃಷ್ಣ ಯೋಗ ಶಿಕ್ಷಣ ಕೇಂದ್ರದ ಸಹಯೋಗದಲ್ಲಿಕಾರ್ಯಕ್ರಮ ನಡೆದಿದೆ.
ವಿವಿಧ ವಯೋಮಾನದ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಕೂರ್ಮಾಸನದಲ್ಲಿ 25 ರಿಂದ 180 ಕೆ.ಜಿ ತೂಕವನ್ನು ಹೊತ್ತು ಉತ್ತಮ ಪ್ರದರ್ಶನ ನೀಡಿದ್ದಾರೆ.
ಶಾಸಕ ದೀರಜ್ ಮುನಿರಾಜು ಮಾತನಾಡಿ, ದೊಡ್ಡಬಳ್ಳಾಪುರ ಯೋಗಕ್ಕೆ ಪ್ರಸಿದ್ಧವಾಗಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಯೋಗಪಟುಗಳು ಇಲ್ಲಿದ್ದಾರೆ. ಯೋಗಾಸನದಲ್ಲಿ ವಿಶಿಷ್ಟ ಪ್ರದರ್ಶನ ನೀಡುತ್ತಿರುವ ಕಿರಿಯ ಯೋಗಪಟುಗಳು ಮುಂದೆ ಉತ್ತಮ ಸಾಧನೆ ಮಾಡಬೇಬೇಕು. ಯೋಗದ ಮಹತ್ವ ಅರಿಯುವ ನಿಟ್ಟಿನಲ್ಲಿ ಈ ವಿಶಿಷ್ಟಯೋಗ ಕ್ರಿಯೆ ಬಗ್ಗೆ ಹೆಚ್ಚಿನ ಪ್ರಚಾರವಾಗಬೇಕಿದೆ ಎಂದರು.
ಯೋಗ ಶಿಕ್ಷಕ, ಕೂರ್ಮಾಸನ ತಜ್ಞ ಎಚ್.ಎಸ್.ರಾಮಕೃಷ್ಣ, ಪರಿಸರವಾದಿ ಕೆ.ಗುರುದೇವ್, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ನೇಕಾರ ಮಹಾಮಂಡಲದ ಅಧ್ಯಕ್ಷ ಪಿ.ಸಿ.ವೆಂಕಟೇಶ್, ಚಲನಚಿತ್ರ ನಟ ವೀಡಾ ಸುಧೀರ್, ಮಹಾದೇವ್, ಶ್ರೀಯೋಗ ದೀಪಿಕಾ ಯೋಗಕೇಂದ್ರದ ಅಧ್ಯಕ್ಷೆ ನಳಿನ, ಕೆ.ಎಸ್.ರವಿ, ಚಿಕ್ಕಣ್ಣ, ಚೌಡರಾಜ್, ಯೋಗ ಗುರು ರಾಮಕೃಷ್ಣ, ಶಿಕ್ಷಕ ಶಿವಶಂಕರಯ್ಯ, ಧನರಾಜ್, ರಾಮಕೃಷ್ಣ, ಜಯಲಕ್ಷ್ಮಿ ನಟರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.