
ಹೊಸಕೋಟೆ ತಾಲ್ಲೂಕು ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆ ಅಧಿಸೂಚನೆ ಮತ್ತು ಶಕ್ತಿ ನೀತಿ ಕರಡು ಪ್ರತಿ ಸುಟ್ಟು ಪ್ರತಿಭಟನೆ ನಡೆಸಲಾಯಿತು
ಹೊಸಕೋಟೆ: ಕೇಂದ್ರ ಸರ್ಕಾರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆ ಜಾರಿ ಅಧಿಸೂಚನೆ ಪ್ರತಿ ಸುಟ್ಟು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ತಾಲ್ಲೂಕು ಸಮಿತಿ, ಆಟೋಲೀವ್ ಇಂಡಿಯಾ ಎಂಪ್ಲಾಯೀಸ್ ಅಸೋಸಿಯೇಷನ್ ಮತ್ತು ವೊಲ್ವೋ ಬಸ್ ಕಾರ್ಮಿಕರ ಸಂಘ ಸಹಯೋಗದಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾನೂನುಗಳು ಕಾರ್ಮಿಕರ ಪಾಲಿನ ಮರಣ ಶಾಸನವಾಗಿದೆ. ಈ ಹಿಂದೆ ರೈತ ವಿರೋಧಿ ಕಾಯ್ದೆ ಜಾರಿಗೆ ತಂದ ಕೇಂದ್ರ ಸರ್ಕಾರ ಈಗ ಕಾರ್ಮಿಕರ ವಿರೋಧಿ ಕಾನೂನು ಜಾರಿಗೊಳಿಸುತ್ತಿರುವುದನ್ನು ತಡೆಯಬೇಕು. ರೈತ ಹೋರಾಟದಂತೆ ಕಾರ್ಮಿಕ ಹೋರಾಟವನ್ನು ರೂಪಿಸಬೇಕಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಯ ಕಾರ್ಮಿಕರಿಗೆ ನ್ಯಾಯ ಸಮ್ಮತ ಜೀವನ ಸಿಗುವುದಿಲ್ಲ ಎಂದು ಹೇಳಿದರು.
ಯಾವುದೇ ಕಾನೂನು ಸಂವಿಧಾನದಡಿ ರಚಿಸಲ್ಪಡಬೇಕು. ಆದರೆ ಸರ್ಕಾರಗಳು ಬಂಡವಾಳ ಶಾಹಿಗಳಿಗೆ ಅನುಕೂಲಕ್ಕೆ ತಕ್ಕಂತೆ ಸಂವಿಧಾನ ತಿರುತ್ತಿದ್ದಾರೆ. ಕೇಂದ್ರ ಸರ್ಕಾರ ಹಳೆಯ 29 ಕಾನೂನುಗಳನ್ನು ರದ್ದುಪಡಿಸಿ ಹೊಸದಾಗಿ ಜಾರಿಗೊಳಿಸಿರುವ ನಾಲ್ಕು ಕಾನೂನುಗಳು ಕಾರ್ಮಿಕರಿಗೆ ಶವಪಟ್ಟಿ ಸಿದ್ಧಪಡಿಸಿದೆ ಎಂದು ಹೊಸಕೋಟೆ ತಾಲ್ಲೂಕು ಸಿಐಟಿಯು ಅಧ್ಯಕ್ಷ ಹರಿಂದ್ರ ಹೇಳಿದರು.
ಕಾರ್ಮಿಕ ಸಂಹಿತೆಗಳನ್ನು ರದ್ದು ಪಡಿಸುವಂತೆ ತಹಶೀಲ್ಡಾರ್ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಎಲ್ಲ ಕಾರ್ಮಿಕರಿಗೂ ಇಎಸ್‌ಐ ಸೌಲಭ್ಯ ಕಲ್ಪಿಸುತ್ತಿದ್ದೇವೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಹೇಳುತ್ತಿವೆ. ಆದರೆ ದೇಶದಲ್ಲಿ ಒಟ್ಟು 780 ಜಿಲ್ಲೆಗಳಿವೆ. ಆದರೆ ಇಎಸ್‌ಐ ಆಸ್ಪತ್ರೆ ಇರುವುದು 180 ಮಾತ್ರಆನಂದ್, ಸಿಐಟಿಯು
ಅಂಬೇಡ್ಕರ್ ಅಶಯದಂತೆ ಕಾರ್ಮಿಕನಿಗೆ ಬೇಕಿರುವುದು ದುಡಿಮೆಗೆ ತಕ್ಕ ಪ್ರತಿಫಲವಲ್ಲ, ಆತನ ಬೆವರಿಗೆ ತಕ್ಕ ಪ್ರತಿಫಲ. ಆಗ ಮಾತ್ರವೇ ಕಾರ್ಮಿಕರು ಎಲ್ಲರಂತೆ ಸಮಾನ ಸ್ಥಾನ ಪಡೆಯಲು ಸಾಧ್ಯಮೋಹನ್ ಬಾಬು, ಸಿಐಟಿಯು
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನಾಲ್ಕು ಕಾನೂನುಗಳು ಕಾರ್ಮಿಕರ ಪಾಲಿನ ಮರಣ ಶಾಸನವೆಂಕಟರಾಜು, ಸಿಐಟಿಯು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.