ADVERTISEMENT

ದೊಡ್ಡಬಳ್ಳಾಪುರ: ಅರಣ್ಯ ಇಲಾಖೆ ಬೋನಿಗೆ ಚಿರತೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 1:58 IST
Last Updated 15 ಡಿಸೆಂಬರ್ 2025, 1:58 IST
ಬೋನಿಗೆ ಬಿದ್ದ ಚಿರತೆ
ಬೋನಿಗೆ ಬಿದ್ದ ಚಿರತೆ   

ದೊಡ್ಡಬಳ್ಳಾಪುರ: ಮೇಕೆ ಮತ್ತು ಸಾಕುನಾಯಿ ತಿಂದು ಪರಾರಿಯಾಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಹಾರೋನಹಳ್ಳಿ ಗ್ರಾಮದ ಹೊರವಲಯದಲ್ಲಿನ ಅರಣ್ಯ ಪ್ರದೇಶ ಅಂಚಿನಲ್ಲಿ ಶನಿವಾರ ರಾಮಕೃಷ್ಣಪ್ಪ ಅವರ ಸಾಕುನಾಯಿ ಹಾಗೂ ಮಾರೇಗೌಡರ ಮೇಕೆ ತಿಂದು ಪರಾರಿಯಾಗಿತ್ತು.

ಈ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.ಕೂಡಲೇ ಜಾಗೃತರಾದ ಅಧಿಕಾರಿಗಳು ಸಂಜೆಯ ವೇಳೆಗೆ ಬೋನ್ ಅಳವಡಿಸಿದ್ದರು‌. ಭಾನುವಾರ ಬೆಳಗ್ಗೆ ಚಿರತೆಯ ಆರ್ಭಟದ ಶಬ್ದ ಕೇಳಿ ಸ್ಥಳಕ್ಕೆ ಗ್ರಾಮಸ್ಥರು ತೆರಳಿದಾಗ ಚಿರತೆ ಬೋನಿನಲ್ಲಿ ಸೆರೆಯಾಗಿತ್ತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.