ADVERTISEMENT

ಆನೇಕಲ್ : ಕಂದಾಯ ಅಧಿಕಾರಿಗಳಿಗೆ ಲೋಕಾಯುಕ್ತ ತರಾಟೆ

ಆನೇಕಲ್ ತಾಲ್ಲೂಕು ಕಚೇರಿಗೆ ದಿಡೀರ್‌ ದಾಳಿ, ದಾಖಲೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 7:33 IST
Last Updated 21 ಜನವರಿ 2024, 7:33 IST
<div class="paragraphs"><p>ಆನೇಕಲ್‌ನ ತಾಲ್ಲೂಕು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಿವಿಧ ವಿಭಾಗಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದರು</p></div>

ಆನೇಕಲ್‌ನ ತಾಲ್ಲೂಕು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಿವಿಧ ವಿಭಾಗಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದರು

   

ಆನೇಕಲ್ : ಪಟ್ಟಣದ ತಾಲ್ಲೂಕು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಿವಿಧ ವಿಭಾಗಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಲೋಕಾಯುಕ್ತ ಎಸ್‌.ಪಿ ಕ್ಯಾಪ್ಟನ್‌ ಅಯ್ಯಪ್ಪ, ಡಿವೈಎಸ್ಪಿ ಎಂ.ಗೌತಮ್‌, ಸುದೀರ್‌ ಮತ್ತು ಇನ್‌ಸ್ಪೆಕ್ಟರ್‌ ಅನಂತ್‌ರಾಮ್‌ ನೇತೃತ್ವದ 15ಕ್ಕೂ ಹೆಚ್ಚು ಮಂದಿ ಅಧಿಕಾರಿಗಳ ತಂಡ ತಾಲ್ಲೂಕು ಕಚೇರಿಗೆ ಮಧ್ಯಾಹ್ನ ದಿಡೀರ್‌ ಭೇಟಿ ನೀಡಿ ಕಚೇರಿಯ ಪ್ರತಿಯೊಂದು ವಿಭಾಗಗಳನ್ನು ಜಾಲಾಡಿತು.

ADVERTISEMENT

ತಾಲ್ಲೂಕು ಕಚೇರಿಯ ಭೂದಾಖಲೆ ಕೊಠಡಿ, ಎಂಆರ್‌ ವಿಭಾಗ, ಸರ್ವೆ ಕಚೇರಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ವಿತರಣಾ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳಿಗೂ ಏಕಕಾಲಕ್ಕೆ ದಾಳಿ ಮಾಡಿ ದಾಖಲೆ ಸಂಗ್ರಹಿಸಿದರು.

ಅರ್ಜಿಗಳನ್ನು ಸಲ್ಲಿಸಿ ತಿಂಗಳುಗಳೇ ಕಳೆದಿದ್ದರೂ ವಿಲೇವಾರಿ ಮಾಡದೇ ಅರ್ಜಿಗಳನ್ನು ಕಚೇರಿಯಲ್ಲಿಯೇ ಉಳಿಸಿಕೊಂಡಿದ್ದ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.