
ಹೊಸಕೋಟೆ: ಮೈಲಾಪುರದ ಮಂಜುನಾಥ್ ಆತ್ಮಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತದಿಂದ ತನಿಖೆ ನಡೆಸಲಾಗುವುದು ಎಂದು ಡಿವೈಎಸ್‌ಪಿ ಮಲ್ಲೇಶ್ ತಿಳಿಸಿದರು.
ಪ್ರಕರಣಕ್ಕೆ ಸಂಬಂದಿಸಿದಂತೆ ನಾಪತ್ತೆಯಾದ ಮಹಿಳೆಯ ದೂರವಾಣಿ ಕರೆ ಮತ್ತು ಸಿಸಿಟಿವಿ ಧೃಶ್ಯಾವಳಿ ಪರಿಶೀಲಿಸಿದಾಗ ಮೈಲಾಪುರದ ಮೃತ ಮಂಜುನಾಥ್ ಅವರೊಟ್ಟಿಗೆ ಹೆಚ್ಚಿನ ಸಂದರ್ಭದಲ್ಲಿ ಮಾತನಾಡಿರುವುದು ದೃಢಪಟ್ಟಿದೆ. ಹೀಗಾಗಿ ಅವರನ್ನು ವಿಚಾರಣೆಗೆ ಠಾಣೆಗೆ ಕರೆಸಿಕೊಳ್ಳಲಾಗಿತ್ತು. ವಿಚಾರಣೆ ಬಳಿಕ ವಾಪಸ್ ಕಳುಹಿಸಲಾಗಿತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆದರೆ ಕುಟುಂಬಸ್ಥರು ಆತ್ಮಹತ್ಯೆಗೆ ಪೊಲೀಸರೇ ನೇರ ಕಾರಣ ಎಂದು ಆರೋಪಿಸಿದ್ದರು. ಕುಟುಂಬಸ್ಥರನ್ನು ಕರೆಸಿ ಪೊಲೀಸರಿಗೂ ಈ ಪ್ರಕರಣಕ್ಕೂ ಯಾವ ಸಂಬಂದವೂ ಇಲ್ಲ. ಯಾರ ಮೇಲೆ ಬೇಕಾದರೂ ದೂರು ಕೊಡಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು ಎಂದು ಧೈರ್ಯ ತುಂಬಲಾಗಿದೆ ಎಂದು ತಿಳಿಸಿದರು.
ನಾಪತ್ತೆಯಾದ ಮಹಿಳೆಯ ದೂರವಾಣಿ ಕರೆ ಮತ್ತು ಸಂಬಂಧಿಕರ ಮನೆಗಳಲ್ಲಿ ವಿಚಾರಿಸಲಾಗುತ್ತಿದೆ. ಆದರೂ ಆಕೆಯ ಸುಳಿವು ಇದುವರೆಗೂ ಪತ್ತೆಯಾಗಿಲ್ಲ. ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಶೀಘ್ರವೇ ಪತ್ತೆಹಚ್ಚುವುದಾಗಿ ತಿಳಿಸಿದರು.
ಯಾವುದೇ ಪ್ರಕರಣ ಇರಲಿ ಅದಕ್ಕೆ ಪೂರಕ ದಾಖಲೆ ಸಿಕ್ಕಾಗ ಸಹಜವಾಗಿ ಅಂತಹ ವ್ಯಕ್ತಿಯನ್ನು ವಿಚಾರಣೆಗೆ ಕರೆಯುತ್ತೇವೆ. ಹಾಗಂತ ವಿಚಾರಣೆ ಮಾಡಿದ್ದರಿಂದಲೇ ಆತ್ಯಹತ್ಯೆ ಮಾಡಿಕೊಂಡರು ಎಂದರೆ ಹೇಗೆ? ಹಾಗಾದರೆ ವಿಚಾರಣೆ ಮಾಡುವುದೇ ತಪ್ಪೆ? ಮತ್ತೆ ತನಿಖೆ ಹೇಗೆ ಮಾಡಬೇಕುಮಲ್ಲೇಶ್ ಡಿವೈಎಸ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.