ADVERTISEMENT

ಗ್ರಾಮ ತೊರೆದ ಪಂಚಾಯಿತಿ ಸದಸ್ಯರು

ಗ್ರಾ.ಪಂ. ಅಧ್ಯಕ್ಷರ ಆಯ್ಕೆಗೆ ದಿನಾಂಕ ಘೋಷಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 2:43 IST
Last Updated 3 ಫೆಬ್ರುವರಿ 2021, 2:43 IST

ದೊಡ್ಡಬಳ್ಳಾಪುರ: ಈಗಷ್ಟೇ ಮೀಸಲಾಯಿತಿ ನಿಗದಿಯಾಗಿರುವ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ದಿನಾಂಕ ಪ್ರಕಟವಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಯಾಗುತ್ತಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಪ್ರವಾಸ ಆರಂಭಿಸಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮ ತೊರೆದು ವಾರಗಟ್ಟಲೇ ಆಗಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳೆ ಸದಸ್ಯರ ಎಲ್ಲ ರೀತಿ ಖರ್ಚು ವೆಚ್ಚ ಭರಿಸುತ್ತಿದ್ದು, ಸದಸ್ಯರಿಗೆ ಉಚಿತ ಹೈಟೆಕ್‌ ಪ್ರವಾಸ ಭಾಗ್ಯ ಒಲಿದೆ.

ಹೀಗಾಗಿ ಐಷಾರಾಮಿ ರೆಸಾರ್ಟ್‌ಗಳಲ್ಲಿಯೇ ಉಳಿದುಕೊಂಡು ಪ್ರವಾಸ ನಡೆಸುತ್ತಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ಚುನಾವಣೆ ನಡೆದಿರುವ 25 ಗ್ರಾಮ ಪಂಚಾಯಿತಿಗಳ ಪೈಕಿ 13 ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮಾತ್ರ ಮೊದಲ ಹಂತದಲ್ಲಿ ದಿನಾಂಕ ನಿಗದಿಯಾಗಿದೆ.

ಫೆ.4ರಂದು ಕಂಟನಕುಂಟೆ, ದೊಡ್ಡತುಮಕೂರು, ಹಾಡೋನಹಳ್ಳಿ,ರಾಜಘಟ್ಟ. ಫೆ.5ರಂದು ಕಾಡನೂರು, ಮೇಲಿನಜೂಗಾನಹಳ್ಳಿ, ಸಕ್ಕರೆಗೊಲ್ಲಹಳ್ಳಿ, ತೂಬಗೆರೆ,ಕೆಸ್ತೂರು,ಕನಸವಾಡಿ. ಫೆ.6ರಂದು ಭಕ್ತರಹಳ್ಳಿ, ತಿಪ್ಪೂರು, ಹಣಬೆ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.