ADVERTISEMENT

ರೈತರಿಗೆ ಧೈರ್ಯ ತುಂಬಿದ ಶಾಸಕ

​ಪ್ರಜಾವಾಣಿ ವಾರ್ತೆ
Published 1 ಮೇ 2020, 9:06 IST
Last Updated 1 ಮೇ 2020, 9:06 IST
ವಿಜಯಪುರ ಹೋಬಳಿ ವೆಂಕಟಗಿರಿಕೋಟೆ ರೈತ ದೇವರಾಜು ಅವರ ದ್ರಾಕ್ಷಿ ತೋಟಕ್ಕೆ ಬೇಟಿ ನೀಡಿದ್ದ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು, ರೈತನಿಗೆ 20 ಸಾವಿರ ಧನಸಹಾಯ ಮಾಡಿದರು
ವಿಜಯಪುರ ಹೋಬಳಿ ವೆಂಕಟಗಿರಿಕೋಟೆ ರೈತ ದೇವರಾಜು ಅವರ ದ್ರಾಕ್ಷಿ ತೋಟಕ್ಕೆ ಬೇಟಿ ನೀಡಿದ್ದ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು, ರೈತನಿಗೆ 20 ಸಾವಿರ ಧನಸಹಾಯ ಮಾಡಿದರು   

ವಿಜಯಪುರ: ಕ್ಷೇತ್ರದ ರೈತರಿಗೆ ಸಂಕಷ್ಟ ಎದುರಾದಂತಹ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಇದ್ದೇನೆ. ಸರ್ಕಾರ ನಿಮ್ಮೊಟ್ಟಿಗೆ ಇದೆ. ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ರೈತರಿಗೆ ಧೈರ್ಯ ತುಂಬಿದರು.

ಹೋಬಳಿಯ ವೆಂಕಟಗಿರಿಕೋಟೆಯ ರೈತ ದೇವರಾಜು ಅವರ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿದ್ದ ಅವರು, ‘ರೈತನಿಗೆ ₹ 20 ಸಾವಿರ ಸಹಾಯ ನೀಡಿ, ಯಾವುದೇ ಕಾರಣಕ್ಕೂ ಧೃತಿಗೆಡುವುದು ಬೇಡ. ಈ ಭಾಗದಲ್ಲಿ ಪದೇ ಪದೇ ದ್ರಾಕ್ಷಿ ಬೆಳೆಗಳು ಹಾನಿಯಾಗುತ್ತಿವೆ. ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಿ, ವಿಶೇಷವಾಗಿ ಈ ಭಾಗದ ರೈತರ ಉಳಿವಿಗಾಗಿ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯ ಮಾಡುತ್ತೇನೆ’ ಎಂದರು.

‘ಸರ್ಕಾರ ರೈತರ ಬೆಳೆಗಳಿಗೆ ವಿಮೆ ಮಾಡಿಸಬೇಕು ಎಂದು ಕರೆ ನೀಡಿದರೂ ಬಹಳಷ್ಟು ಮಂದಿ ರೈತರು, ವಿಮೆಯ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಇದು ಸರಿಯಲ್ಲ’ ಎಂದರು.

ADVERTISEMENT

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ, ಬಮೂಲ್ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್, ಕಾರಹಳ್ಳಿ ಮುನೇಗೌಡ, ಕೋರಮಂಗಲ ವೀರಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುನಿರಾಜು, ಹಾಪ್ ಕಾಮ್ಸ್ ನಿರ್ದೇಶಕ ಹುರುಳುಗುರ್ಕಿ ಶ್ರೀನಿವಾಸ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಕಲ್ಯಾಣ್ ಕುಮಾರ್ ಬಾಬು, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.